ಗಂಡುಮೆಟ್ಟಿದ ನಾಡು ಚಿತ್ರದುರ್ಗದಲ್ಲಿ 75ನೇ ಸಮ್ಮೇಳನ

ಚಿತ್ರದುರ್ಗದಲ್ಲಿ 75ನೇ ಸಾಹಿತ್ಯ ಸಮ್ಮೇಳನಉಡುಪಿ, ಡಿ.14 : ಮುಂದಿನ 75ನೇ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ನಡೆಯಲಿದೆ. ಕರಾವಳಿ ಜನರ ಆತಿಥ್ಯ ಮತ್ತು ಸೊಬಗು ಸವಿದ ಸಾಹಿತ್ಯಾಸಕ್ತರು, ಬಯಲುಸೀಮೆಯ ಆತಿಥ್ಯವನ್ನು ಮುಂದಿನವರ್ಷ ಸ್ವೀಕರಿಸಲಿದ್ದಾರೆ.

ಸಾಹಿತ್ಯ ಸಮ್ಮೇಳನ ನಡೆಸಲು ಬಳ್ಳಾರಿ ಸಹಾ ಉತ್ಸುಕತೆ ತೋರಿಸಿತ್ತು. ಅಂತಿಮವಾಗಿ ನಡೆದ ಗುಪ್ತ ಮತದಾನದಲ್ಲಿ ಚಿತ್ರದುರ್ಗ ಎರಡು ಮತಗಳನ್ನು ಹೆಚ್ಚಿಗೆ ಪಡೆದು, ಸಮ್ಮೇಳನದ ನಡೆಸುವ ಹೊಣೆಯನ್ನು ತನ್ನದಾಗಿಸಿಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಬಳ್ಳಾರಿ ಪರವಾಗಿ 14, ಚಿತ್ರದುರ್ಗ ಪರವಾಗಿ 16ಮತಗಳು ಚಲಾವಣೆಯಾಗಿವೆ.

ಮುಂದಿನ ಸಮ್ಮೇಳನ ವಜ್ರಮಹೋತ್ಸವದ ಕಾರಣ, ಪ್ರಾಮುಖ್ಯತೆ ಪಡೆದಿದೆ. ಚಿತ್ರದುರ್ಗದ ನೆಲದಲ್ಲಿ ಇದು ಮೊದಲ ಸಮ್ಮೇಳನವಾಗಿದ್ದು, ಚೊಚ್ಚಲ ಸಮ್ಮೇಳನವನ್ನು ಚಾರಿತ್ರಿಕಗೊಳಿಸಲು ಜಿಲ್ಲಾ ಕಸಾಪ ಉತ್ಸಾಹ ಪ್ರದರ್ಶಿಸಿದೆ. ಈ ಹಿಂದೆ ಎರಡು ಸಲ ಚಿತ್ರದುರ್ಗ ಸಮ್ಮೇಳನ ನಡೆಸಲು ಮುಂದೆ ಬಂದಿತ್ತು.

(ದಟ್ಸ್ ಕನ್ನಡ ವಾರ್ತೆ)

75ನೇ ಕನ್ನಡ ಸಾಹಿತ್ಯ ಸಮ್ಮೇಳನ, ಚಿತ್ರದುರ್ಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+