ಉಡುಪಿಯಲ್ಲಿ ಅಕ್ಟೋಬರ್ 22ರಿಂದ ಯಕ್ಷಗಾನ ಸಪ್ತೋತ್ಸವ
ಉಡುಪಿ, ಅ.19 : ಅಂಬಲ್‌ಪಾಡಿ ಶ್ರೀ ಲಕ್ಷ್ಮೀ ಜನಾರ್ಧನ ಕಲಾ ಮಂಡಳಿ ಸುವರ್ಣೋತ್ಸವ ಸಮಿತಿ 'ಯಕ್ಷಗಾನ ಸಪ್ತೋತ್ಸವ"ವನ್ನು ಉಡುಪಿಯ ರಾಜಾಂಗಣದಲ್ಲಿ ಅ.22 ರಿಂದ 28ರವೆಗೆ ಏರ್ಪಡಿಸಿದೆ.
ಕೃಷ್ಣಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಪ್ತೋತ್ಸವವನ್ನು ಉದ್ಘಾಟಿಸಲಿದ್ದಾರೆ. ಭಾಗವತರಾದ ಹಲ್ಲಾಡಿ ಸುಬ್ರಾಯ ಮಲ್ಯ ಮತ್ತು ಜಯಂತ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಮಿತಿಯ ಗೌರವ ಅಧ್ಯಕ್ಷರಾದ ಎನ್.ಬಿ.ವಿಜಯ್ ಬಲ್ಲಾಳ್ ಸುದ್ದಿಗಾರರಿಗೆ ತಿಳಿಸಿದರು.
ಗುಡಿಬೈಲು ಯಕ್ಷಗಾನ ಕಲಾಕ್ಷೇತ್ರ, ಬಡನಿಧಿಯೂರು ಶ್ರೀ ಗಜಾನನ ಯಕ್ಷಗಾನ ಸಂಘ ಮತ್ತು ಹೇರೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಲಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಮಿತಿಯ ಅಧ್ಯಕ್ಷರಾದ ಆನಂದ ಗಾಣಿಗ, ಕಾರ್ಯದರ್ಶಿ ಮುರಳಿ ಕಾಡೇಕರ್, ಲಕ್ಷ್ಮೀ ಜನಾರ್ಧನ ಕಲಾ ಮಂಡಲಿಯ ಅಧ್ಯಕ್ಷರಾದ ಎ.ರಾಘವೇಂದ್ರ ಉಪಾಧ್ಯಾಯ, ಕಾರ್ಯದರ್ಶಿ ಅಜಿತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications