ಕೊನೆಗೂ ಶ್ರೀರಾಮನನ್ನು ದೇವರೆಂದು ಒಪ್ಪಿದ ಕರುಣಾನಿಧಿ
ಚೆನ್ನೈ, ಅ.18 : ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ, ತಮ್ಮ ಮಾತು ಬದಲಿಸಿದ್ದಾರೆ. ರಾಮ,ಯೇಸು, ಮಹಮ್ಮದ್ ಎಲ್ಲರೂ ದೇವರೇ.. ಬೇಕಿದ್ದರೇ ಸೇತು ಸಮುದ್ರಂ ಯೋಜನೆಯ ಹೆಸರು ಬದಲಿಸಿ, ಸೇತು ರಾಮನ್ ಯೋಜನೆ ಎಂದು ಹೆಸರಿಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಅವರು, ನಮ್ಮ ಸರ್ಕಾರ ಎಲ್ಲಾ ಧರ್ಮವನ್ನೂ ಗೌರವಿಸುತ್ತದೆ. ಯಾವುದೇ ಧರ್ಮೀಯರ ಭಾವನೆಗಳಿಗೆ ನೋವು ತರುವುದು ನಮಗೆ ಇಷ್ಟವಿಲ್ಲ ಎಂದರು.
ನಮಗೆ ಸೇತು ಸಮುದ್ರಂ ಯೋಜನೆ ಪೂರ್ಣ ಗೊಳ್ಳುವುದಷ್ಟೇ ಮುಖ್ಯ ಎಂದಿರುವ ಕರುಣಾನಿಧಿ, ರಾಮನನ್ನು ಇತ್ತೀಚೆಗೆ ಗೇಲಿ ಮಾಡಿ ವಿವಾದ ಸೃಷ್ಟಿಸಿದ್ದರು. ವಿವಾದ ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿರುವ ಕರುಣಾನಿಧಿ, ವಿವಾದಕ್ಕೆ ತೆರೆ ಎಳೆಯಲು ರಜನಿಕಾಂತ್ ಅವರ ಸಹಾಯ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.
(ಏಜನ್ಸೀಸ್)












Click it and Unblock the Notifications