ಮುಂದುವರಿದ ಕಸರತ್ತು : ಗುರುವಾರದ ರಾಜಕೀಯ ಚಿತ್ರಣ

ಬೆಂಗಳೂರು, ಅ.11 : ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ನಿಧನದ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗುರುವಾರ(ಅ.11)ತುಸು ಮಂಕಾಗಿರುವಂತೆ ಕಂಡು ಬಂತು. ಆದರೆ ತೆರೆಮೆರೆಯಲ್ಲಿ ನಾನಾ ಯತ್ನಗಳು ನಡೆದಿವೆ. ಸಹಜವಾಗಿಯೇ ಊಹಾಪೋಹಗಳು ಹೆಚ್ಚಿವೆ.

ಇಂದಿನ ರಾಜಕೀಯ ಹೀಗಿತ್ತು :

  • ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರ ಭೇಟಿ.. ಹಿಂದಿನ ಸರ್ಕಾರದ ಮಹತ್ವದ ನಿರ್ಧಾರಗಳನ್ನು ತಡೆ ಹಿಡಿಯಿರಿ ಎಂದು ರಾಜ್ಯಪಾಲರಿಗೆ ಮನವಿ... ಜೊತೆಗೆ ಐಎಎಸ್ ಅಧಿಕಾರಿ ವರ್ಗಾವಣೆ ರದ್ದುಗೊಳಿಸುವಂತೆ ಕೋರಿಕೆ.
  • ಸರ್ಕಾರ ರಚನೆ ಪ್ರಸ್ತಾಪ ಕಾಂಗ್ರೆಸ್ ಮುಂದಿಲ್ಲ : ಎನ್.ಧರ್ಮಸಿಂಗ್
  • ಮುರುಘ ರಾಜೇಂದ್ರ ಶ್ರೀಗಳ ಭೇಟಿ ಮಾಡಿದ ಯಡಿಯೂರಪ್ಪ, ಜೆಡಿಎಸ್ ನಾಯಕರ ವಿರುದ್ಧ ದೂರು ಒಪ್ಪಿಸಿದರು.
  • ಜನತಾ ಪರಿವಾರದಲ್ಲಿ ನಾನು ಏಕಾಂಗಿ.. ಈಗಿನ ಪೀಳಿಗೆ ನಮ್ಮೊಂದಿಗೆ ಸ್ಪಂದಿಸುತ್ತಿಲ್ಲ.. : ಹೆಚ್.ಡಿ.ದೇವೇಗೌಡ
  • ಜೆಡಿಎಸ್ ಬಾಹ್ಯ ಬೆಂಬಲ ಕೊಟ್ಟರೂ ನಾವು ಸರ್ಕಾರ ರಚಿಸುವುದಿಲ್ಲ. ನಾವು ಜೆಡಿಎಸ್ ನಿಂದ ದೂರ ಇದ್ದೇವೆ. ಬಾಹ್ಯ ಬೆಂಬಲ ನೀಡಿ ಎಂದು ಜೆಡಿಎಸ್ ಗೆ ಸಲಹೆ ನೀಡಿಲ್ಲ... ಇದು ಮಾಧ್ಯಮ ಸೃಷ್ಟಿಸಿದ ವದಂತಿ.. : ಬಿ.ಎಸ್.ಯಡಿಯೂರಪ್ಪ.
  • ಬಿಜೆಪಿ ಸೇರಿದ ನಿರ್ದೇಶಕ ಮಹೇಂದ್ರ.. ಕೊಳ್ಳೆಗಾಲದಿಂದ ಶಾಸಕ ಸ್ಥಾನಕ್ಕ ಸ್ಪರ್ಧಿಸುವ ಬಯಕೆ.
  • ಜನತಾ ನ್ಯಾಯಾಲಕ್ಕೆ ಹೋಗುವುದೊಂದೇ, ಸದ್ಯದ ಅನಿಶ್ಚಿತತೆಗೆ ಪರಿಹಾರ : ಹೆಚ್.ಡಿ.ದೇವೇಗೌಡ
  • ನನ್ನ ಮಾವ(ದೇವೇಗೌಡ)ನವರ ವಿರುದ್ಧ ನಾನು ಅಸಮಾಧಾನ ವ್ಯಕ್ತಪಡಿಸಿಲ್ಲ : ಅನಿತಾ ಕುಮಾರಸ್ವಾಮಿ
  • ಲಿಂಗಾಯಿತ ಶಾಸಕರ ತೆರೆಮರೆ ಯತ್ನ.

(ದಟ್ಸ್ ಕನ್ನಡ ವಾರ್ತೆ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+