ಸೆಪ್ಟೆಂಬರ್ 26ರಿಂದ ಕುಮಾರಣ್ಣನ ಕಸ್ತೂರಿ ಚಾನೆಲ್

ಅನಿತಾ ಕುಮಾರಸ್ವಾಮಿಬೆಂಗಳೂರು, ಸೆಪ್ಟೆಂಬರ್ 21 : ಈ ನೆಲದ ಮೊದಲ ಖಾಸಗಿ ಕನ್ನಡ ಚಾನೆಲ್ ಕಸ್ತೂರಿ, ಸೆ.26ರಿಂದ ತನ್ನ ಪ್ರಸಾರ ಆರಂಭಿಸಲಿದೆ. ಮನೆಮನೆಯಲ್ಲಿ ಕಸ್ತೂರಿ ಪರಿಮಳ ಹರಡಲಿದೆ ಎನ್ನುತ್ತಿದೆ ಪತ್ರಿಕಾ ಪ್ರಕಟಣೆ.

ಹೆಚ್.ಡಿ.ದೇವೇಗೌಡ ಕುಟುಂಬದ ಈ ಚಾನೆಲ್ ಗೆ ಹೆಚ್.ಡಿ.ಕುಮಾರಸ್ವಾಮಿ ಚೇರ್ಮನ್ . ಆದರೆ ಇದು ಜೆಡಿಎಸ್ ಚಾನೆಲ್ ಅಲ್ಲ. ರಾಜಕಾರಣವನ್ನು ನಾವು ಎಂದಿಗೂ ಚಾನೆಲ್ ಜೊತೆ ಬೆರೆಸುವುದಿಲ್ಲ ಅನ್ನುವುದು ಚಾನೆಲ್ ವ್ಯವಸ್ಥಾಪಕ ನಿರ್ದೇಶಕಿ ಅನಿತಾ ಕುಮಾರಸ್ವಾಮಿ ಅವರ ಭರವಸೆ.

ಮನೆಮಂದಿಯ ಅವಶ್ಯಕತೆಯನ್ನು ಕಸ್ತೂರಿ ಪೂರೈಸಲಿದೆ. ಹೀಗಾಗಿಯೇ ಚಾನೆಲ್ ಆರಂಭದ ಹಿಂದೆ ಸಾಕಷ್ಟು ಸಿದ್ಧತೆ ನಡೆಸಿದ್ದೇವೆ. ನಮ್ಮ ಪ್ರಯತ್ನ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂದು ಚಾನೆಲ್ ಹೇಳಿಕೊಂಡಿದೆ. ಮನರಂಜನೆ ವಿಭಾಗದ ಹೊಣೆಯನ್ನು ನಿರ್ದೇಶಕ ಎಸ್.ನಾರಾಯಣ್ ಹೊತ್ತಿದ್ದಾರೆ. ಉದಯ, ಈಟೀವಿ, ಟೀವಿ9ಗೆ 'ಕಸ್ತೂರಿ' ಯಾವ ರೀತಿ ಪೈಪೋಟಿ ನೀಡುತ್ತದೆಯೋ ಎಂಬ ಕುತೂಹಲ ವೀಕ್ಷಕರಲ್ಲಿದೆ. ಮತ್ತೊಂದು ಕಡೆ ಸುವರ್ಣ, ಜೀ ಕನ್ನಡ ಚುರುಕಾಗುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಸುದ್ದಿ :
ಕುಮಾರಣ್ಣನ ಟೀವಿ!: ಕಸ್ತೂರಿ ಪರಿಮಳ ಉಂಟಾ ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+