ರೋ'ಹಿಟ್' ಆರ್ ಪಿ'ಸ್ವಿಂಗ್'ಜಾದುಗೆ ಸೋತ ಆಫ್ರಿಕಾ!

ರೋ'ಹಿಟ್' ಆರ್ ಪಿ'ಸ್ವಿಂಗ್'ಜಾದುಗೆ ಸೋತ ಆಫ್ರಿಕಾ! ಡರ್ಬನ್, ಸೆಪ್ಟೆಂಬರ್ 21 : ಗ್ರೆಗ್‌ರಂತಹ ಮೇಧಾವಿ ಕೋಚ್ ಇಲ್ಲ. ಶತಕ ವೀರರಾದ ಸಚಿನ್, ದ್ರಾವಿಡ್, ಗಂಗೂಲಿಯಂತಹ ಹಿರಿಯರಿಲ್ಲ. ಆದರೂ ಟ್ವಿಂಟಿ20 ವಿಶ್ವಕಪ್‌ನಲ್ಲಿ ಧೋನಿ ಸಾರಥ್ಯದ ಭಾರತ ತಂಡ ಮುನ್ನುಗಿದೆ. ಕೆರೇಬಿಯನ್ ವಿಶ್ವಕಪ್‌ನಲ್ಲಿ ಸಾಧಿಸಲಾಗದ್ದನ್ನು ಟ್ವೆಂಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸಾಧಿಸಿದೆ.

ಗುರುವಾರ(ಸೆ.20)ರಾತ್ರಿ ನಡೆದ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್‌ ಪಂದ್ಯ ರೋಮಾಂಚಕಾರಿಯಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 37 ರನ್‌ಗಳ ಜಯ ಸಾಧಿಸಿದೆ. ತನ್ನ ಸ್ವಂತ ನೆಲದಲ್ಲಿಯೇ ದಕ್ಷಿಣ ಆಫ್ರಿಕಾವನ್ನು ಮಣಿದಿದೆ. ಆಲ್‌ರೌಂಡರ್ ರೋಹಿತ್ ಶರ್ಮರ ಅರ್ಧಶತಕ, ಆರ್.ಪಿ. ಸಿಂಗ್‌ರ ಮಾರಕ ಬೌಲಿಂಗ್ ಭಾರತ ತಂಡದ ಜಯಕ್ಕೆ ಕಾರಣವಾಯಿತು. ರೋಹಿತ್ ಶರ್ಮ ಪಂದ್ಯ ಪುರುಷೋತ್ತಮ ಮನ್ನಣೆಗೆ ಪಾತ್ರರಾದರು. ಈ ಪಂದ್ಯದಿಂದಾಗಿ ಭಾರತ ಸೆಮಿಫೈನಲ್‌ ತಲುಪುವಂತಾಯಿತು, ದಕ್ಷಿಣ ಆಫ್ರಿಕಾ ಮನೆಗೆ ಹೋಗುವಂತಾಯಿತು.

5ವಿಕೆಟ್ ನಷ್ಟಕ್ಕೆ 153 ಕಲೆಹಾಕಿದ ಭಾರತವೊಡ್ಡಿದ ಸವಾಲನ್ನು ದ.ಆಫ್ರಿಕಾ ಎದುರಿಸಲಾಗಲಿಲ್ಲ. 9ವಿಕೆಟ್ ಕಳೆದು ಕೊಂಡು 116 ರನ್ನುಗಳ ಪಡೆದ ದ.ಆಫ್ರಿಕಾ ಸೋತು ಶರಣಾಯಿತು. ಶನಿವಾರ ರಾತ್ರಿ 9.30ಕ್ಕೆ ಭಾರತ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

(ದಟ್ಸ್ ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+