ಬಡ ಗರ್ಭಿಣಿ ಸ್ತ್ರೀಯರಿಗೆ ಮಡಿಲು: ಹೊಸ ಯೋಜನೆ
ಬೆಂಗಳೂರು, ಆಗಸ್ಟ್ 24 : ಹೆರಿಗೆ ಎಂದರೆ ಮರು ಜನ್ಮ ಎಂದೇ ಹೇಳಲಾಗುತ್ತದೆ. ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಬಡ ಮಹಿಳೆಯರು, ಹೆರಿಗೆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಗರ್ಭಿಣಿ ಮಹಿಳೆಯರಿಗಾಗಿ ಮಡಿಲು ಎನ್ನುವ ವಿನೂತನ ಯೋಜನೆಯನ್ನು ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಈ ಬಗ್ಗೆ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್.ಅಶೋಕ್, ಬಡ ಗರ್ಭಿಣಿ ಮಹಿಳೆಯರಿಗೆ ಈ ಹೊಸ ಯೋಜನೆ ವರದಾನ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸುಮಾರು 825 ರೂಪಾಯಿ ಮೌಲ್ಯದ ಆರೋಗ್ಯ ಕಿಟ್ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ಪ್ರತಿವರ್ಷ ಹತ್ತು ಲಕ್ಷ ಹೆರಿಗೆಗಳು ನಡೆಯುತ್ತಿದ್ದು, ಅದರಲ್ಲಿ ಏಳು ಲಕ್ಷ ಮಹಿಳೆಯರು ಬಡತನ ರೇಖೆಗಿಂತಲೂ ಕೆಳಗಿದ್ದಾರೆ. ಸುಮಾರು 3.5ಲಕ್ಷ ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗುತ್ತಿವೆ. ಯೋಜನೆಗಾಗಿ ಸುಮಾರು 14ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಶೋಕ್ ವಿವರಿಸಿದ್ದಾರೆ.
(ಯುಎನ್ಐ)












Click it and Unblock the Notifications