ಕರವೇ ಪ್ರತಿಭಟನೆ : ನಿರ್ದೇಶಕ ಯೋಗರಾಜ ಭಟ್ ಕ್ಷಮೆ
ಮುಂಗಾರು ಮಳೆ ನಿರ್ದೇಶಕ ಯೋಗರಾಜ್ ಭಟ್ ಸಕಲೇಶಪುರ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ.
ಸಕಲೇಶಪುರದಲ್ಲಿ ಗಾಳಿಪಟ ಚಿತ್ರದ ಚಿತ್ರೀಕರಣ ನಡೆಸುತ್ತಿರುವ ಯೋಗರಾಜ ಭಟ್ ರನ್ನು ಭೇಟಿ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಸದಸ್ಯರು ಕ್ಷಮೆಗೆ ಒತ್ತಾಯಿಸಿದರು.
ಒಂದೇ ಒಂದು ಸಾರಿ ಕಣ್ಣುಂದೆ ಬಾರೆ.. ಸೇರಿದಂತೆ ಮುಂಗಾರು ಮಳೆ ಚಿತ್ರದ ಹಾಡುಗಳು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಸಕಲೇಶಪುರದ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಯೋಗರಾಜ ಭಟ್ ಸಕಲೇಶಪುರವನ್ನು ಮರೆತುಬಿಟ್ಟಿದ್ದಾರೆ.ಚಿತ್ರೀಕರಣಕ್ಕೆ ಸಹಕಾರ ನೀಡಿದ ಸಕಲೇಶಪುರದ ಜನರಿಗೆ ಕೃತಜ್ಞತೆ ಹೇಳುವ ಸೌಜನ್ಯ ಮರೆತಿದ್ದಾರೆ.
ಮಡಿಕೇರಿ ಜನರಿಗೆ ಮಾತ್ರ ಕೃತಜ್ಞತೆ ಹೇಳಿದ್ದಾರೆ. ಯೋಗರಾಜ ಭಟ್ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಸದಸ್ಯರು ಪಟ್ಟು ಹಿಡಿದ ಪ್ರಸಂಗ ನಡೆಯಿತು.
ಇದು ಅಚಾತುರ್ಯದಿಂದಾದ ತಪ್ಪು. ಸಕಲೇಶ ಪುರದ ಜನರ ಬಗ್ಗೆ ನನಗೆ ಗೌರವವಿದೆ. ದಯವಿಟ್ಟು ಕ್ಷಮಿಸಿ ಎಂದು ಯೋಗರಾಜ ಭಟ್ ಕ್ಷಮೆಯಾಚಿಸಿದರು.












Click it and Unblock the Notifications