ಮಂಗಳೂರಲ್ಲಿ ಎಸ್ಇಝಡ್ : ಕಟೀಲು ದೇಗುಲಕ್ಕೂ ಕುತ್ತು
ವಿಶೇಷ ಆರ್ಥಿಕ ವಲಯ(ಎಸ್ಇಝಡ್) ಯೋಜನೆಗೆ ವಿರೋಧ ಎಲ್ಲೆಡೆ ವ್ಯಕ್ತವಾಗುತ್ತಿದೆ. ಮಂಗಳೂರಿನ ಎಸ್ಇಝಡ್ ಯೋಜನೆಯಿಂದ ಕಟೀಲು ದೇವಸ್ಥಾನ ನಾಶವಾಗಲಿದೆ ಎಂಬ ಕೂಗು ಕೇಳಿ ಬರುತ್ತಿದೆ.
ಯೋಜನೆ ಪರಿಣಾಮ ಸದ್ಯಕ್ಕೆ ಎರಡು ಪುರಾತನ ಮಠ ಮತ್ತು ಎರಡು ದೇವಸ್ಥಾನಗಳು ಕಣ್ಮರೆಯಾಗಲಿವೆ. ಯೋಜನೆ ವಿಸ್ತಾರಗೊಂಡರೆ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನವೂ ಮಾಯವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
***
ಪ್ರತಿಭಾ ಪಾಟೀಲರ ಮೊದಲ ದಿನ
ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಪ್ರತಿಭಾ ಪಾಟೀಲ್, ತಮ್ಮ ಅಧಿಕಾರದ ಮೊದಲ ದಿನವನ್ನು ಗಣ್ಯರ ಸಮಾಧಿಗೆ ಭೇಟಿ ನೀಡುವ ಮುಖಾಂತರ ಕಳೆದರು.
ಜೈಲ್ ಸಿಂಗ್, ಶಂಕರ್ ದಯಾಳ್ ಶರ್ಮಾ, ಕೆ.ಆರ್.ನಾರಾಯಣ್, ಫಕ್ರುದ್ದೀನ್ ಆಲಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತಿತರರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದರು. ನಂತರ ಪ್ರಧಾನಿ ಮತ್ತು ಅವರ ಪತ್ನಿ ಜೊತೆ ರಾಷ್ಟ್ರಪತಿ ಭವನದಲ್ಲಿ 20ನಿಮಿಷ ಮಾತುಕತೆ ನಡೆಸಿದರು.












Click it and Unblock the Notifications