ಪ್ರತಿಭಾ ಪಾಟೀಲ್ ಭಾರತದ ಪ್ರಪ್ರಥಮ ಮಹಿಳಾ ರಾಷ್ಟ್ರಪತಿ

ನವದೆಹಲಿ, ಜುಲೈ 21 : ಭಾರತದ 13ನೇ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಅವರು ಶನಿವಾರ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಅಧಿಕಾರ ದುರ್ಬಳಕೆ, ಅಪರಾಧಿಗಳಿಗೆ ರಕ್ಷಣೆ ನೀಡಿದ ಆರೋಪಗಳನ್ನು ಎದುರಿಸುತ್ತಿದ್ದರೂ, ಪ್ರತಿಸ್ಪರ್ಧಿ ಭೈರೋನ್‌ಸಿಂಗ್ ಶೇಖಾವತ್‌ರನ್ನು ಭಾರೀ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯುಪಿಎ ಮತ್ತು ಎಡಪಕ್ಷಗಳ ಬೆಂಬಲದಿಂದ ಸ್ಪರ್ಧಿಸಿದ್ದ ಪ್ರತಿಭಾಗೆ ದಕ್ಕಿದ್ದು ಒಟ್ಟು 2931 ಮತಗಳು. ಎನ್‌ಡಿಎ ಬೆಂಬಲದಿಂದ ಶೇಖಾವತ್‌ಗೆ ಸಿಕ್ಕಿದ್ದು ಕೇವಲ 1449 ಮತಗಳು ಮಾತ್ರ. ಒಟ್ಟು 3,06,810 ಮೌಲ್ಯದ ಮತಗಳ ಅಂತರದಿಂದ ಶೇಖಾವತ್ ಸೋಲನ್ನೊಪ್ಪಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಪ್ರತಿಭಾ ನಿರೀಕ್ಷಿಸಿದ್ದಕ್ಕಿಂತ 11 ಸಾವಿರ ಮತಗಳನ್ನು ಹೆಚ್ಚು ಗಳಿಸಿದ್ದಾರೆ.

ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಿರುವುದು ಸಂತೋಷವಾಗುತ್ತಿದೆ ಎಂದು ಪ್ರತಿಭಾ ಪಾಟೀಲ್ ಸಂತಸವನ್ನು ಹಂಚಿಕೊಂಡಿದ್ದಾರೆ.

ಮೊದಲ ಹಂತದ ಮತಎಣಿಕೆ ಮುಗಿದಿದ್ದಾಗಲೇ ಪ್ರತಿಭಾ ಆಯ್ಕೆಯಾಗುವುದು ಹೆಚ್ಚುಕಮ್ಮಿ ಖಚಿತವಾಗಿತ್ತು. ಶೇಖಾವತ್‌ರ 861 ಮತಗಳಿಗೆ ಪ್ರತಿಯಾಗಿ ಒಟ್ಟು 1575 ಮತಗಳನ್ನು ಗಳಿಸಿ ಅಭೂತಪೂರ್ವ ಯಶಸ್ಸಿನತ್ತ ಹೆಜ್ಜೆ ಹಾಕಿದ್ದರು.

ಕರ್ನಾಟಕದಲ್ಲಿ ಜೆಡಿಎಸ್ ಮತ ನೀಡುವುದರಿಂದ ಹೊರಗುಳಿದಿದ್ದರೂ ಬಿಜೆಪಿ ಬೆಂಬಲದಿಂದ ಸಮಾನ ಮತ ಶೇಖಾವತ್ ಗಳಿಸಿದ್ದಾರೆ. ಶೇಖಾವತ್‌ಗೆ ಒಟ್ಟು ದಕ್ಕಿದ್ದು 82 ಮತಗಳು. ಕಾಂಗ್ರೆಸ್, ಜೆಡಿಯು ಬೆಂಬಲದಿಂದ ಪ್ರತಿಭಾ 83 ಮತ ಗಳಿಸಿದ್ದಾರೆ. ಇದರಲ್ಲಿ ಕೆಲ ಬಿಜೆಪಿ ಶಾಸಕರ ಪಾಲೂ ಇದೆ.

ಎನ್‌ಡಿಎಯನ್ನು ಧಿಕ್ಕರಿಸಿ ಮರಾಠಾ ಮಹಿಳೆಯೆಂದು ಬೆಂಬಲಿಸಿದ ಶಿವಸೇನೆಯ ನೆರವಿನಿಂದ ಮಹಾರಾಷ್ಟ್ರದಲ್ಲಿ ಪ್ರತಿಭಾ 223 ಮತ ಗುಡ್ಡೆ ಹಾಕಿದ್ದಾರೆ. ಎನ್‌ಡಿಎಯ ದುರ್ಬಲ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಭೈರೋನ್‌ಸಿಂಗ ಶೇಖಾವತ್ ಮಹಾರಾಷ್ಟ್ರದಲ್ಲಿ ಕೇವಲ 58 ಮತ ಗಳಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಈ ರಾಜ್ಯದಲ್ಲಿ ಪ್ರತಿ ಮತದ ಮೌಲ್ಯ 175.

ಬಿಜೆಪಿ ಆಡಳಿತದ ಗುಜರಾತ್ ಮತ್ತು ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮತಗಳನ್ನು ಗಳಿಸಿ ಪ್ರತಿಭಾ ಅಚ್ಚರಿ ಮೂಡಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಪ್ರತಿಭಾರ 223 ಮತಗಳಿಗೆ ಪ್ರತಿಯಾಗಿ ಕೇವಲ 2 ಮತ ಎಣಿಸಿಕೊಂಡು ಶೇಖಾವತ್ ಮುಖಭಂಗಕ್ಕೀಡಾಗಿದ್ದಾರೆ. ಇಲ್ಲಿಯ ಪ್ರತಿ ಮತದ ಮೌಲ್ಯ 148. ಗುಜರಾತ್‌ನಲ್ಲಿ ಪ್ರತಿಭಾ ಗಳಿಸಿದ್ದು 57 ಆದರೂ, ಅವು ನಿರೀಕ್ಷೆಗಿಂತ ಹೆಚ್ಚು, ಶೇಖಾವತ್‌ಗೆ 123 ಮತಗಳು ದಕ್ಕಿವೆ.

ಆಸ್ಸಾಂ, ಅರುಣಾಚಲ ಪ್ರದೇಶ, ಹರ್ಯಾಣಾ, ಜಮ್ಮು ಮತ್ತು ಕಾಶ್ಮೀರ್‌, ಜಾರ್ಖಂಡ್‌ದಲ್ಲಿಯೂ ಪ್ರತಿಭಾ ಮುನ್ನಡೆಯನ್ನು ಸಾಧಿಸಿದ್ದಾರೆ. ದೆಹಲಿಯಲ್ಲಿ ಹಾಕಿದ ಒಟ್ಟು 69 ಮತಗಳಲ್ಲಿ 50ನ ಮತಗಳು ಪ್ರತಿಭಾ ಪಾಲಿಗೆ ಸಂದಿವೆ.

ಆದರೆ, ಜೆಡಿಯು-ಬಿಜೆಪಿ ಅಧಿಕಾರದಲ್ಲಿರುವ ಬಿಹಾರದಲ್ಲಿ ಶೇಖಾವತ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಅವರಿಗೆ ದಕ್ಕಿದ್ದು 145 ಮತಗಳು, ಪ್ರತಿಭಾಗೆ 53.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+