ರಾಜದೀಪ್ ಮತ್ತು ರೀತುಗೆ ಪತ್ರಿಕಾರಂಗದ ಅತ್ಯುನ್ನತ ಪ್ರಶಸ್ತಿ
ನವದೆಹಲಿ, ಜುಲೈ 17 : ಸಿಎನ್‌ಎನ್ ಐಬಿಎನ್‌ನ ಪ್ರಧಾನ ಸಂಪಾದಕ ರಾಜದೀಪ್ ಸರ್ದೇಸಾಯಿ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿರಿಯ ಪತ್ರಕರ್ತೆ ರೀತು ಸರೀನ್ ಅವರು ಪತ್ರಿಕೋದ್ಯಮದಲ್ಲಿ ನೀಡಲಾಗುವ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ನಿಧನರಾದ ಖ್ಯಾತ ಕ್ರಿಕೆಟಿಗ ದಿಲೀಪ್ ಸರ್ದೇಸಾಯಿಯವರ ಪುತ್ರರಾದ ರಾಜದೀಪ್ ರವರಿಗೆ ಟೀವಿ ಮಾಧ್ಯಮದಲ್ಲಿ ಸಲ್ಲಿಸಲಾದ ಅತ್ಯುತ್ತಮ ಸೇವೆಗೆ ಪ್ರತಿಷ್ಠಿತ ವರ್ಷದ ಪತ್ರಕರ್ತ ಪ್ರಶಸ್ತಿ ಹಾಗೂ ಮುದ್ರಣ ಮಾಧ್ಯಮದಲ್ಲಿ ರೀತು ಸರೀನ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
2006 ಮತ್ತು 2007 ಸಾಲಿನ ರಾಮನಾಥ್ ಗೋಯೆಂಕಾ ಎಕ್ಸೆಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿಗಳನ್ನು ಇಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಪ್ರದಾನ ಮಾಡಿದರು.
ಕಳೆದ ಸಾಲಿನ ಎಲ್ಲ ಪ್ರಮುಖ ಘಟನೆಗಳನ್ನು, ವಿಶೇಷವಾಗಿ ರಾಜಕೀಯ ಸುದ್ದಿಗಳನ್ನು ಸಿಎನ್‌ಎನ್ ಐಬಿಎನ್ ಅತ್ಯುತ್ತಮವಾಗಿ ವರದಿ ಮಾಡಿತ್ತು. ಬೋಫೋರ್ಸ್ ಸೇರಿದಂತೆ ಎಲ್ಲ ಪ್ರಮುಖ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ವರದಿ ಮಾಡಿದ್ದನ್ನು ಪರಿಗಣಿಸಿ ರೀತುಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
ಸಿಎನ್‌ಎನ್ ಐಬಿಎನ್‌ನ ನಾಲ್ವರು, ಎನ್‌ಡಿಟಿವಿಯ ಮೂವರು ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ನ ನಾಲ್ವರು ಪತ್ರಕರ್ತರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
(ಯುಎನ್‌ಐ)












Click it and Unblock the Notifications