ದೇವೇಗೌಡರಿಗೆ 75 : ಸೋಲು-ಗೆಲುವು; ಆಸೆ-ನಿರಾಸೆ

ನಾಡು ಕಂಡ ಒಬ್ಬ ಒಳ್ಳೆ ನಾಯಕ, ಅರ್ಧದಲ್ಲಿಯೇ ದಾರಿ ತಪ್ಪಿದ ಎನ್ನುವುದು ಕೆಲವರ ಟೀಕೆ. ಈ ಬಗ್ಗೆ ನೀವೇನಂತೀರಾ?

  • ಪುಷ್ಪಪಾದ
ಬೆಂಗಳೂರು : ಶುಕ್ರವಾರದ ಎಲ್ಲಾ ಪತ್ರಿಕೆಗಳಲ್ಲೂ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಜಾಹೀರಾತು ರಾರಾಜಿಸುತ್ತಿದೆ. ಯಾಕೆಂದರೆ ಇಂದು ದೇವೇಗೌಡರ 75ನೇ ಜನ್ಮದಿನ.

ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಆಶೀರ್ವಾದ ಪಡೆಯಲು ದೇವೇಗೌಡರು, ತಮ್ಮ ಕುಟುಂಬದೊಂದಿಗೆ ತಿರುಪತಿಯ ವೆಂಕಟರಮಣನ ಸನ್ನಿಧಿಗೆ ತೆರಳಿದ್ದಾರೆ. ಅಲ್ಲಿ ವಿಶೇಷ ಪೂಜೆಗಳನ್ನು ಅವರು ನಡೆಸುತ್ತಿದ್ದಾರೆ.

ಹೊಳೆನರಸೀಪುರದಲ್ಲಿ ಮೇ.18,1933ರಂದು ಜನಿಸಿದ ಹಳ್ಳಿ ಹೈದ, ಡೆಲ್ಲಿಯಲ್ಲಿ ಪ್ರಧಾನಿ ಗದ್ದುಗೆ ಹತ್ತಿದ್ದು ನಿಜಕ್ಕೂ ಸಿನಿಮಾಕ್ಕೆ ಹೇಳಿ ಮಾಡಿಸಿದ ಕತೆಯಂತಿದೆ. ಜೊತೆಗೆ ಹೆಮ್ಮೆ ಪಡುವಂತಹ ಸಂಗತಿಯೇ. ಆದರೆ ಈ ಮಾತನ್ನು ಬಹುಮಂದಿ ಒಪ್ಪುವುದಿಲ್ಲ. ಅವರು ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ನಾವು ಏನು ಮಾಡುವಂತಿಲ್ಲ.

‘ದೇವೇಗೌಡರು ಪ್ರಧಾನಿಯಾಗಿ ಐದು ವರ್ಷಗಳನ್ನು ಪೂರೈಸಿದ್ದರೆ ಆ ಕತೆಯೇ ಬೇರೆಯಾಗುತ್ತಿತ್ತು. ನೆಹರೂ ನಂತರದ ಅತ್ಯುತ್ತಮ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದರು’ ಎನ್ನುತ್ತಾರೆ ದೇವೇಗೌಡರ ಆಳ್ವಿಕೆಯಲ್ಲಿ ಸಂಪುಟ ಕಾರ್ಯದರ್ಶಿಯಾಗಿದ್ದ ಟಿ.ಎಸ್‌.ಆರ್‌.ಸುಬ್ರಹ್ಮಣ್ಯ.

ಹಾಸನದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್‌ ಡಿಪ್ಲೋಮ ಮುಗಿಸಿದ ನಂತರ, ಊರಲ್ಲಿ ಸಿವಿಲ್‌ ಕಾಂಟ್ರ್ಯಾಕ್ಟರ್‌ ಆಗಿದ್ದ ಅವರು ರಾಜಕೀಯಕ್ಕೆ ಬಂದದ್ದು, ಶಾಸಕರಾದದ್ದು, ಮಂತ್ರಿಯಾದದ್ದು, ಮುಖ್ಯಮಂತ್ರಿಯಾದದ್ದು, ಸಂಸದರಾದದ್ದು , ಪ್ರಧಾನಿಯಾದದ್ದು ಎಲ್ಲವೂ ಬೇಗಬೇಗ. ವೇಗವೇಗ.

ರೈತರ ಪರವಾಗಿ ಆಗಾಗ ಕೂಗು ಹಾಕುವ ದೇವೇಗೌಡರಿಗೀಗ ಅರಳುಮರಳು. ಧೃತರಾಷ್ಟ್ರನಂತೆ ಪುತ್ರವ್ಯಾಮೋಹದಲ್ಲಿ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ. ನಾಡು ಕಂಡ ಒಬ್ಬ ಒಳ್ಳೆ ನಾಯಕ, ಅರ್ಧದಲ್ಲಿಯೇ ದಾರಿ ತಪ್ಪಿದ ಎನ್ನುವುದು ಕೆಲವರ ಟೀಕೆ. ಈ ಬಗ್ಗೆ ನೀವೇನಂತೀರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+