‘ಉದಯವಾಣಿ’ ಪೂರ್ಣಿಮಾಗೆ ಖಾದ್ರಿ ಶಾಮಣ್ಣ ಪ್ರಶಸ್ತಿ
ಬೆಂಗಳೂರು : ಹಿರಿಯ ಪತ್ರಕರ್ತೆ ಮತ್ತು ಉದಯವಾಣಿ ಬೆಂಗಳೂರು ವಿಭಾಗದ ಸಂಪಾದಕಿ ಆರ್.ಪೂರ್ಣಿಮಾ ಅವರಿಗೆ, ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ.
2006ನೇ ಸಾಲಿನ ಪ್ರಶಸ್ತಿಗೆ ಪೂರ್ಣಿಮಾ ಆಯ್ಕೆಯಾಗಿದ್ದು, ಜೂ.6ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಜರ್‌ನಲ್ಲಿ ಪ್ರಶಸ್ತಿ ನೀಡಿಕೆ ಸಮಾರಂಭ ನಡೆಯಲಿದೆ. ಪ್ರಶಸ್ತಿ 10ಸಾವಿರ ರೂ. ನಗದು ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿದೆ ಎಂದು ಖಾದ್ರಿ ಶಾಮಣ್ಣ ಟ್ರಸ್ಟ್‌ನ ಕಾರ್ಯದರ್ಶಿ ಖಾದ್ರಿ ಎಸ್.ಅಚ್ಯುತನ್ ತಿಳಿಸಿದ್ದಾರೆ.
ಎಸ್.ವಿ.ಜಯಶೀಲರಾವ್, ಎಂ.ಕೆ.ಭಾಸ್ಕರರಾವ್ ಸೇರಿದಂತೆ ನಾಲ್ವರು ಸದಸ್ಯರು ಆಯ್ಕೆ ಸಮಿತಿ, ಪೂರ್ಣಿಮಾರನ್ನು ಆಯ್ಕೆ ಮಾಡಿದೆ.
(ದಟ್ಸ್ ಕನ್ನಡ ವಾರ್ತೆ)
ಇನ್ನೊಂದು ಸುದ್ದಿ-
‘ವಿಜಯಕರ್ನಾಟಕ’ ವಿಶ್ವೇಶ್ವರ ಭಟ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ












Click it and Unblock the Notifications