ಬೆಂಗಳೂರಿಗರ ಮೋಡಿಮಾಡಿದ್ದ ಜಾನಪದ ಜಾತ್ರೆ ಇನ್ನಿಲ್ಲ!
ಬೆಂಗಳೂರು : ರಾಜಧಾನಿ ನಗರಕ್ಕೆ ಸಂಸ್ಕೃತಿಯ ನಂಟು ಬೆಸೆದಿದ್ದ ಜಾನಪದ ಜಾತ್ರೆ ಅನಿರ್ದಿಷ್ಟ ಕಾಲ ಸ್ಥಗಿತಗೊಂಡಿದೆ.
ಮುಂದಿನ ಸೂಚನೆ ನೀಡುವ ತನಕ, ಜಾನಪದ ಜಾತ್ರೆಯನ್ನು ಸಂಘಟಿಸಿದಂತೆ ಚಾತ್ರೆ ಸಂಚಾಲಕ ಶ್ರೀನಿವಾಸ್ ಜಿ.ಕಪ್ಪಣ್ಣ ಅವರಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ನೀಡಿದೆ. ಸರ್ಕಾರದ ಆದೇಶದ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪ್ಪಣ್ಣ, ಸರ್ಕಾರದ ನಿರ್ಧಾರ ನನಗೆ ಅರ್ಥವಾಗುತ್ತಿಲ್ಲ. ಜಾನಪದ ಜಾತ್ರೆಗೆ ಹಣಕಾಸಿನ ತೊಂದರೆಯೂ ಇಲ್ಲ. ಮೇ ಅಂತ್ಯದ ತನಕ ನಿರಾತಂಕವಾಗಿ ಜಾತ್ರೆ ಸಂಘಟಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ 2ನೇ ಮತ್ತು 4ನೇ ಶನಿವಾರ-ಭಾನುವಾರ ಸಂಜೆ ಲಾಲ್‌ಬಾಗ್ ಸೇರಿದಂತೆ ನಗರದ ವಿವಿಧೆಡೆ ಜಾನಪದ ಜಾತ್ರೆ ನಡೆಯುತ್ತಿತ್ತು. ಈವರೆಗೆ ನಡೆದ 31 ಜಾತ್ರೆಗಳು, ಜನಪದ ಕಲಾವಿದರಿಗೆ ಪ್ರೋತ್ಸಾಹ ಮತ್ತು ಸಾರ್ವಜನಿಕರಿಗೆ ಹೊಸ ಅನುಭವ ನೀಡಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications