ಮದ್ರಸಾ ಮೌಲ್ವಿಯಾಬ್ಬನಿಂದ ಬಾಲಕರಿಗೆ ಘೋರ ಶಿಕ್ಷೆ!
ಬೆಂಗಳೂರು : ಇವರೇನು ಧರ್ಮ ಗುರುಗಳೋ? ರಾಕ್ಷಸರೋ? -ಈ ಪ್ರಶ್ನೆ ನಗರದಲ್ಲಿ ಕೇಳಿ ಬರುತ್ತಿದೆ.
ಧರ್ಮ ಬೋಧನೆ ತರಗತಿಗೆ ಹಾಜರಾಗಲಿಲ್ಲವೆಂದು ಮೌಲ್ವಿ ರೆಜೀಬ್ ಎಂಬಾತ, ರಾಕ್ಷಸನಂತೆ ವರ್ತಿಸಿದ್ದಾನೆ. ಇಬ್ಬರು ಬಾಲಕರನ್ನು ಅಮಾನವೀಯವಾಗಿ ಶಿಕ್ಷಿಸಿದ್ದಾನೆ. ಆತನ ಬೆಲ್ಟ್ ಏಟಿನಿಂದ ನೊಂದ ಬಾಲಕರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಯಾಣ ನಗರದ ಗುಂಡು ತೋಪಿನ ಹಿಂಭಾಗದಲ್ಲಿರುವ ಮದ್ರಸಾದಲ್ಲಿ ಈ ಘಟನೆ ನಡೆದಿದೆ. ಶಿಕ್ಷೆಗೊಳಗಾದ ಮಕ್ಕಳನ್ನು ಉಮರ್ ಫಾರೂಕ್(7) ಮತ್ತು ಅಲೀಮುದ್ದೀನ್(4) ಎಂದು ಗುರ್ತಿಸಲಾಗಿದೆ. ಧರ್ಮ ಬೋಧನೆಯ ಒಂದು ತರಗತಿ ತಪ್ಪಿಸಿದ್ದರಿಂದ ಮೌಲ್ವಿ ರೆಜೀಬ್ ಕೋಪಗೊಂಡು ಬಾಲಕರನ್ನು ಉಗ್ರವಾಗಿ ದಂಡಿಸಿದ್ದಾನೆ.
ಮಕ್ಕಳ ಬೆನ್ನಿನ ತುಂಬ ಬಾಸುಂಡೆಗಳು ಬಂದರೂ ಬಿಡದೇ, ಕತ್ತರಿಯಿಂದ ಮಕ್ಕಳ ಕೈ ಮತ್ತು ಕಾಲು ಬೆರಳುಗಳ ತುದಿಯನ್ನು ಕತ್ತರಿಸಿ ಹಿಂಸಿಸಿರುವುದು ತಿಳಿದು ಬಂದಿದೆ. ಪೋಷಕರು ಮೌಲ್ವಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications