ಮಹಾವೀರ ಜಯಂತಿ : ಸಿ.ಎಂ. ಜನತಾದರ್ಶನಕ್ಕೂ ರಜೆ
ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನರ ಕಷ್ಟ ಆಲಿಸುವ, ಸ್ಥಳದಲ್ಲಿಯೇ ಸ್ಪಂದಿಸುವ ಜನತಾದರ್ಶನ ಕಾರ್ಯಕ್ರಮ, ಶನಿವಾರ(ಮಾ.31) ನಡೆಯುತ್ತಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಜನತಾದರ್ಶನ ನಡೆಯಬೇಕಿತ್ತು. ಮಹಾವೀರ ಜಯಂತಿ ಪ್ರಯುಕ್ತ ಜನತಾದರ್ಶನವನ್ನು ರದ್ದುಪಡಿಸಲಾಗಿದೆ. ಮುಂದೆ ಎಂದಿನಂತೆ ನಡೆಯಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಅಧಿಕಾರಿಗಳು ಕೋರಿದ್ದಾರೆ.
ರಜೆ ಇಲ್ಲ : ಕರ್ನಾಟಕ ಮತ್ತು ಗೋವಾದಲ್ಲಿ ಆದಾಯ ತೆರಿಗೆ ಇಲಾಖೆಯ ರಿಟರ್ನ್ ರೆಸಿಪ್ಟ್ ಕೌಂಟರ್‌ಗಳು, ರಜೆ ದಿನವಾದ ಶನಿವಾರ(ಮಾ.31)ವೂ ಕಾರ್ಯ ನಿರ್ವಹಿಸಲಿವೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications