ಪರಿಸರ ದಸರ : ಹಂಸಲೇಖ ಸಾರಥ್ಯದಿ ‘ಹಾಡಿನ ಹಬ್ಬ’

ಬೆಂಗಳೂರು : ಏ.1ರಂದು ನಗರದಲ್ಲಿ ‘ಪರಿಸರ ದಸರ’ ಉತ್ಸವ ನಡೆಯಲಿದೆ. ಇಲ್ಲಿ ಹಾಡುಗಳ ರಸದೌತಣವೂ ಇದೆ. ಎಸ್‌.ಬಿ.ಬಾಲಸುಬ್ರಹ್ಮಣ್ಯಂ, ಚಿತ್ರಾ ಮತ್ತಿತರ ಗಾಯಕರು ಕೇಳುಗರ ರಂಜಿಸಲಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಗಣನೀಯ ಸಾಧನೆಗೈದ ಆದಿಚುಂಚನಗಿರಿ ಶ್ರೀಗಳಿಗೆ, ನಿವಾರಣ ಸಂಸ್ಥೆಯ ‘ಸೇವಾ ಸೂರ್ಯ ’ ಪ್ರಶಸ್ತಿ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ. ಚಂದ್ರಶೇಖರ ಹೇಳಿದ್ದಾರೆ.

ಹಂಸಲೇಖ ಸಂಸ್ಥಾಪನೆಯ ದೇಸೀ ವಿದ್ಯಾ ಸಂಸ್ಥೆ ಮತ್ತು ಜೀ ಕನ್ನಡ ಚಾನೆಲ್‌ ಜಂಟಿಯಾಗಿ ಪರಿಸರ ದಸರವನ್ನು ಹಮ್ಮಿಕೊಂಡಿವೆ. ನ್ಯಾಷನಲ್‌ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಈ ಉತ್ಸವದಲ್ಲಿ , ಹಂಸಲೇಖ ಸಾರಥ್ಯದಲ್ಲಿ ಬೃಹತ್‌ ಹಾಡಿನ ಹಬ್ಬ ನಡೆಯಲಿದೆ.

ಏ.1ರ ಸಂಜೆ 6.30ಕ್ಕೆ ಜನಪದ ಹಾಡು-ಕುಣಿತದ ಕಾರ್ಯಕ್ರಮಗಳು ನಡೆಯಲಿದ್ದು, 400ಜನಪದ ಕಲಾವಿದರು, 20ಮಂದಿ ಹಿನ್ನೆಲೆ ಗಾಯಕರು ಉತ್ಸವಕ್ಕೆ ರಂಗು ತರಲಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+