ಮೈತ್ರಿ ಸರ್ಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ...
ಬೆಂಗಳೂರು : ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ(ಕರ್ನಾಟಕ ಅಭಿವೃದ್ಧಿ ರಂಗ)ದ ಎರಡನೇ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
ಹಣಕಾಸು ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶುಕ್ರವಾರ ವಿಧಾನಸಭೆಯಲ್ಲಿ ಮಧ್ಯಾಹ್ನ 12ಗಂಟೆಗೆ ಬಜೆಟ್ ಭಾಷಣ ಆರಂಭಿಸಲಿದ್ದಾರೆ.
ಸಾರಾಯಿ ನಿಷೇಧ, ಲಾಟರಿ ನಿಷೇಧ, ರೈತರ ಸಾಲ ಮನ್ನಾ ಮೊದಲಾದ ವಿಚಾರಗಳಿಗೆ ಬದ್ಧ ಎಂದು ಸರ್ಕಾರ ಘೋಷಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಬಜೆಟ್ ನಾಡಿನಾದ್ಯಂತ ಕುತೂಹಲ ಹುಟ್ಟುಹಾಕಿದೆ. ಅಲ್ಲದೆ ಅನೇಕ ಜನಪ್ರಿಯ ಯೋಜನೆಗಳೂ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಈ ಮಧ್ಯೆ, ಬಜೆಟ್ ಕುರಿತ ಮಾಹಿತಿ ಬಹಿರಂಗವಾಗಿದ್ದು, ಬಜೆಟ್‌ನ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications