ವಿದ್ಯುತ್‌ ಚೋರರ ಕರಾಮತ್ತು ; ಕೂರ್ಗ್‌ನಲ್ಲಿ ಕತ್ತಲು!

ಮಡಿಕೇರಿ : ಬಿಳಿಕೆರೆ, ಹುಣಸೂರು, ಕೆ.ಆರ್‌ ನಗರ, ಹೊಳೆನರಸೀಪುರ ಮತ್ತು ಕೊಡಗು ಜಿಲ್ಲೆಯಲ್ಲಿ ಎರಡು ದಿನ(ಫೆ.27 ಮತ್ತು ಫೆ .28) ಕತ್ತಲೆ ಆವರಿಸಿತ್ತು!

ಚಾಮುಂಡೇಶ್ವರಿ ವಿದ್ಯುತ್‌ ಪ್ರಸರಣ ನಿಗಮ(ಚೆಸ್ಕಾಂ)ದ ಅಧಿಕಾರಿಗಳು ಮೊದಲು, ಪವರ್‌ ಕಟ್‌ ಅಥವಾ ಲೋಡ್‌ ಶೆಡ್ಡಿಂಗ್‌ ಇರಬಹುದೆಂದು ನಿರ್ಲಕ್ಷ್ಯ ಮಾಡಿದರು. ಆದರೆ ಚೆಸ್ಕಾಂನ ಹೂಟಗಳ್ಳಿ ವಿಭಾಗದ ಅಧಿಕಾರಿಗಳು ಹುಣಸೂರು ಪೊಲೀಸರಿಗೆ ದೂರು ನೀಡಿದಾಗ, ಎಲ್ಲರೂ ಸಮಸ್ಯೆಯ ಮೂಲ ಹುಡುಕಲು ಪ್ರಾರಂಭಿಸಿದರು.

ಜೀಪು ಹತ್ತಿ ಚೆಸ್ಕಾಂನ ಅಧಿಕಾರಿಗಳು, ಪೊಲೀಸರು ದೊಡ್ಡಹಳ್ಳಿಯಿಂದ ಬಿಳಿಕೆರೆವರೆಗೂ ಸುತ್ತಾಡಿದಾಗ, ಬಿಳಿಕೆರೆ ಸಮೀಪ 1000 ಮೀ. ಅಧಿಕ ಉದ್ದದ ತಾಮ್ರದ ವಿದ್ಯುತ್‌ ತಂತಿಗಳ ಸುರಳಿ ಪತ್ತೆ ಅಯಿತು. ವಿದ್ಯುತ್‌ ಕಳ್ಳರ ಈ ಕುಕೃತ್ಯದಿಂದ ವಿದ್ಯುತ್‌ ಸಮಸ್ಯೆ ಉಂಟಾಗಿರುವ ಸಂಗತಿ ಬಯಲಾಯಿತು. ಈ ತಂತಿ ಮೌಲ್ಯ ಸುಮಾರು 3 ಲಕ್ಷ . ವಿದ್ಯುತ್‌ ಕಳ್ಳರಿಗಾಗಿ ಹುಡುಕಾಟ ಮುಂದುವರೆದಿದೆ.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+