ಅತ್ತ ರಾಷ್ಟ್ರೀಯ ಕ್ರೀಡಾಕೂಟ; ಇತ್ತ ಬಾಂಬ್ ಸ್ಫೋಟ!!
ಗೌಹಾತಿ : 33ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನೆಗೆ ಮುನ್ನ, ಶಕ್ತಿಯುತ ಬಾಂಬ್‌ವೊಂದು ನಗರದ ಹೊರವಲಯದ ಕಾಮಾಕ್ಯ ರೈಲ್ವೆ ಸ್ಟೇಷನ್‌ನಲ್ಲಿ ಶುಕ್ರವಾರ ಸ್ಫೋಟಿಸಿದೆ.
ಗೌಹಾತಿ ಮತ್ತು ರಾಂಗೀಯಾ ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ಇಡುವ ಬೆದರಿಕೆಗಳ ಹಿನ್ನೆಲೆಯಲ್ಲಿ ಕಟ್ಟೆಚ್ಚರವಹಿಸಲಾಗಿತ್ತು. ಆರಂಭದಲ್ಲಿ ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕಿದ್ದ ಉಲ್ಫಾ ಸಂಘಟನೆ, ಗುರುವಾರ ಬಹಿಷ್ಕಾರ ವಾಪಸು ಪಡೆದಿರುವುದಾಗಿ ಹೇಳಿತ್ತು. ಹೀಗಾಗಿ ಆತಂಕ ನಿವಾರಣೆಯಾಗಿತ್ತು. ಈ ಮಧ್ಯೆ ಕಾಮಾಕ್ಯದಲ್ಲಿ ಬಾಂಬ್ ಸ್ಫೋಟಿಸಿದೆ.
ರೈಲ್ವೆ ಪ್ಲಾಟ್‌ಫಾರಂಗೆ ಬಾಂಬ್ ಸ್ಫೋಟದಿಂದ ಹಾನಿಯಾಗಿದ್ದು, ಬೇರೆ ಯಾವುದೇ ತೊಂದರೆ ಉಂಟಾಗಿಲ್ಲ.
ಕ್ರೀಡಾಕೂಟ ಉದ್ಘಾಟನೆಗಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಕೇಂದ್ರ ಗೃಹಸಚಿವ ಶಿವರಾಜ ಪಾಟೀಲ್ ಗೌಹಾತಿಗೆ ಆಗಮಿಸಿದ ಕೆಲವೇ ಕ್ಷಣಗಳ ಹಿಂದಷ್ಟೇ ಈ ಬಾಂಬ್ ಸ್ಫೋಟ ನಡೆದಿದೆ.
(ಯುಎನ್‌ಐ)












Click it and Unblock the Notifications