ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರತ್ನಗಿರಿಯ ನೆತ್ತಿಯಲ್ಲಿ ಬಾಹುಬಲಿಗೆ ‘ಮಸು’್ತಕಾಭಿಷೇಕ ಶುರು

By Staff
|
Google Oneindia Kannada News

Mahamastakabhisheka starts at Dharmasthalaಧರ್ಮಸ್ಥಳ : ಶ್ರೀಕ್ಷೇತ್ರದ ಬಾಹುಬಲಿ ಮೂರ್ತಿಗೆ ಶತಮಾನದ ಮೊದಲ ಮಹಾಮಸ್ತಕಾಭಿಷೇಕದ ಸಂಭ್ರಮ. ಶುಕ್ರವಾರ ಬೆಳಗ್ಗೆಯಿಂದಲೇ ಮಸ್ತಕಾಭಿಷೇಕದ ಪ್ರಕ್ರಿಯೆಗಳು ಆರಂಭಗೊಂಡಿವೆ.

39ಅಡಿ ಎತ್ತರದ ಬಾಹುಬಲಿ ಮೂರ್ತಿಯ ಮಹಾಮಜ್ಜನಕ್ಕಾಗಿ ಜೈನರು ಮತ್ತು ಇನ್ನಿತರ ಧರ್ಮದ ಜನರು ತಂಡೋಪತಂಡವಾಗಿ ಆಗಮಿಸಿದ್ದಾರೆ. ರತ್ನಗಿರಿಯಲ್ಲಿ 12ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿಯ ಮಹಾಮಜ್ಜನಕ್ಕಾಗಿ ವಿಶೇಷ ಏರ್ಪಾಡುಗಳನ್ನು ಮಾಡಲಾಗಿದೆ. ಹಿಂದೆ 1982ರಲ್ಲಿ, 1995ರಲ್ಲಿ ಇಲ್ಲಿ ಮಹಾಮಜ್ಜನ ನಡೆದಿತ್ತು.

1008 ಕಳಶಗಳಲ್ಲಿ ನೀರು, ಎಳನೀರು, ಕಬ್ಬಿನ ರಸ, ಹಾಲು, ಅಕ್ಕಿ ಹಿಟ್ಟು, ಅರಿಶಿಣ, ಶ್ರೀಗಂಧದ ಪುಡಿ, ಅಷ್ಠಗಂಧದ ಅಭಿಷೇಕ ನಡೆದಿದೆ.

ಇಂದು ಬೆಳಗ್ಗೆ 10.44ನಿಮಿಷಕ್ಕೆ ಮಸ್ತಾಕಾಭಿಷೇಕ ಆರಂಭಗೊಂಡಿದ್ದು, ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿಯಾಂದಿಗೆ ಪ್ರಕ್ರಿಯೆಗೆ ತೆರೆ ಬೀಳಲಿದೆ. ಪುಷ್ಪವೃಷ್ಟಿ ಮತ್ತಿತರ ಕಾರ್ಯಕ್ರಮಗಳು ನಡೆದಿವೆ.

ಮಸ್ತಕಾಭಿಷೇಕದ ವಿವರಗಳು

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X