‘ಸಾವಯವ ಕೃಷಿ ’ ಪ್ರಚಾರಕ್ಕೆ ಶ್ರೀ ರವಿಶಂಕರ್ ಕೊಡುಗೆ
ಬೆಂಗಳೂರು : ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಅವರಿಗೆ, 2006 ನೇ ಸಾಲಿನ ಸಂತ ಧ್ಯಾನೇಶ್ವರ ವಿಶ್ವ ಶಾಂತಿ ಪ್ರಶಸ್ತಿ ಲಭಿಸಿದೆ.
ವಿಶ್ವ ಶಾಂತಿ ಕೇಂದ್ರ ಹಾಗೂ ಪುಣೆಯ ಮಹಾರಾಷ್ಟ್ರ ಇನ್ಸ್ಟಿ ಟ್ಯೂಟ್ ಅಫ್ ಟೆಕ್ನಾಲಜಿ(ಎಂಐಟಿ) ಮೂಲಕ ನೀಡುವ ವಿಶ್ವ ಶಾಂತಿ ಪ್ರಶಸ್ತಿಯು 5,25,000 ರೂ. ನಗದು ಹಾಗೂ ಸಂತ ಧ್ಯಾನೇಶ್ವರ ಅವರ ಚಿನ್ನದ ಲೇಪನದ ಮೂರ್ತಿಯನ್ನು ಒಳಗೊಂಡಿದೆ.
ಪ್ರಶಸ್ತಿಯಿಂದ ಬಂದ ಹಣವನ್ನು ದೇಶದಲ್ಲಿನ ಸಾವಯವ ಕೃಷಿ ಪ್ರಚಾರಕ್ಕೆ ಬಳಸಲಾಗುವುದು ಎಂದು ಶ್ರೀ ರವಿಶಂಕರ್ ಹೇಳಿದ್ದಾರೆ.
ಪುಣೆಯ ಅಲಂದಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಶ್ರೀ ರವಿಶಂಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಗಣಕ ತಜ್ಞ ವಿಜಯ ಭಾಟ್ಕರ್ ಹಾಗೂ ಮಾಜಿ ಕೇಂದ್ರ ಚುನಾವಣಾ ಅಯುಕ್ತ ಟಿ.ಎನ್. ಶೇಷನ್ ಮುಂತಾದ ಅನೇಕ ಖ್ಯಾತನಾಮರು ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications