ಜ.13 : ನಾಗಾರ್ಜುನ ಯೋಜನೆ ವಿರೋಧಿಸಿ ಬಂದ್
ಉಡುಪಿ : ಜನವರಿ 13ರಂದು ರಸ್ತೆ ತಡೆ ಹಾಗೂ ಬೃಹತ್ ಮೆರವಣಿಗೆ ಮೂಲಕ, ನಾಗರ್ಜುನ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಇಲ್ಲಿನ ಹೋರಾಟ ಸಮಿತಿ ಹೇಳಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಮನೋರಮ ಮಧ್ವರಾಜ್, ಬೈಂದೂರು, ಉಲ್ಲಾಳ ಮುಂತಾದೆಡೆ ರಸ್ತೆ ತಡೆ ನಡೆಸಲಾಗುವುದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹೋರಾಟ ನಡೆಯಲಿದೆ ಎಂದಿದ್ದಾರೆ.
ಇದು ಸಾಂಕೇತಿಕ ಹೋರಾಟವಲ್ಲ. ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸುವುದೇ ನಮ್ಮ ಉದ್ದೇಶ. ಇಲ್ಲಿನ ಉಪ ಅಯುಕ್ತರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಸರ್ಕಾರ ಯೋಜನೆಗೆ ನೀಡಿರುವ ಅನುಮತಿಯನ್ನು ವಾಪಸ್ಸು ಪಡೆಯಬೇಕು. ತಜ್ಞರು, ಪರಿಸರವಾದಿಗಳು ಮತ್ತು ಸ್ಥಳೀಯರ ಅಭಿಪ್ರಾಯ ಪಡೆಯಬೇಕು. ಪಡುಬಿದ್ರೆಯಲ್ಲಿ ಅರಂಭವಾದ ಧರಣಿ 20ನೇ ದಿನಕ್ಕೆ ಕಾಲಿಟ್ಟಿದೆ. ಅದರೆ ಈ ಬಗ್ಗೆ ಸರ್ಕಾರ ಗಮನ ಹರಿಸದೇ ಸುಮ್ಮನೆ ಕೂತಿದೆ ಎಂದು ಸಂಸದೆ ಮನೋರಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications