ಬೈಲುಕುಪ್ಪೆಯಲ್ಲಿ ದಲೈಲಾಮಾ : ವಾರದಿಂದ ಪ್ರವಚನ
ಮಡಿಕೇರಿ : ಬೌದ್ಧಗುರು ದಲೈಲಾಮಾ ಕಳೆದ ಐದು ದಿನಗಳಿಂದ ಬೈಲಕುಪ್ಪೆ ಟಿಬೆಟಿಯನ್ನರ ಪುನರ್ವಸತಿ ತಾಣದಲ್ಲಿ ಬಿಡಾರ ಹೂಡಿದ್ದು, ಭಕ್ತಾದಿಗಳು ತಂಡೋಪತಂಡವಾಗಿ ದರ್ಶನ ಪಡೆಯುತ್ತಿದ್ದಾರೆ.
ಜನವರಿ 13ರವರೆಗೆ ಅವರು ಬೈಲಕುಪ್ಪೆಯಲ್ಲೇ ತಂಗಲಿದ್ದು, ಆನಂತರ ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾಕ್ಕೆ ತೆರಳಲಿದ್ದಾರೆ. ಈ ಮಧ್ಯೆ ಲಾಮಾ ಅವರ ಧಾರ್ಮಿಕ ಪ್ರವಚನಗಳು ನಿರ್ವಿಘ್ನವಾಗಿ ನಡೆದಿವೆ.
ಅವರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಸುಮಾರು 500 ಪೊಲೀಸ್ ಸಿಬ್ಬಂದಿ ಬೈಲಕುಪ್ಪೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.
(ಯುಎನ್‌ಐ)












Click it and Unblock the Notifications