ದೇವೇಗೌಡರ ಪ್ರಶ್ನಿಸಿದ ವೀರೇಂದ್ರಕುಮಾರ್ ಸಸ್ಪೆಂಡ್!
ನವದೆಹಲಿ : ದೇವೇಗೌಡರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸುವುದಾಗಿ, ಮೊನ್ನೆಯಷ್ಟೇ ಹೇಳಿಕೆ ನೀಡಿದ್ದ ಲೋಕಸಭಾ ಸದಸ್ಯಎಂ.ಪಿ.ವೀರೇಂದ್ರ ಕುಮಾರ್ ಅವರನ್ನೇ ಈಗ ಉಚ್ಚಾಟಿಸಲಾಗುತ್ತಿದೆ. ಅವರ ಪ್ರಾಥಮಿಕ ಸದಸ್ಯತ್ವವನ್ನು ಜೆಡಿಎಸ್ ಅಮಾನತುಗೊಳಿಸಿದೆ.
ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವೀರೇಂದ್ರ ಕುಮಾರ್ ವಿರುದ್ಧ ಶಿಸ್ತುಕ್ರಮ ಜರುಗಿಸಲು, ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ದೇವೇಗೌಡರ ವಿರುದ್ಧ ಹೇಳಿಕೆ ನೀಡಿದ್ದ ಸುರೇಂದ್ರ ಮೋಹನ್, ಮೃಣಾಲ್‌ಗೋರೆ, ಶೋಯೆಬ್ ಇಕ್ಬಾಲ್ ಬಗ್ಗೆ ಮೆದುಧೋರಣೆ ಅನುಸರಿಸಲಾಗಿದೆ.
ತಮ್ಮ ಅಮಾನತಿನ ಬಗ್ಗೆ ಪ್ರತಿಕ್ರಿಯಿಸಿರುವ ವೀರೇಂದ್ರ ಕುಮಾರ್, ನಮ್ಮದೇ ನಿಜವಾದ ಜೆಡಿಎಸ್. ಜಾತ್ಯತೀತ ನಾಯಕರು ನಮ್ಮಿಂದಿದ್ದಾರೆ. ತಿರುವನಂತಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ, ಜೆಡಿಎಸ್ ಮುಂದಿನ ಹಾದಿ ಸ್ಪಷ್ಟವಾಗಲಿದೆ ಎಂದಿದ್ದಾರೆ.
(ಏಜನ್ಸೀಸ್)












Click it and Unblock the Notifications