ಸ್ಥಳೀಯ ಬಿಜೆಪಿ ನಾಯಕನ ಕೊಲೆ : ಸುರತ್ಕಲ್ ಉದ್ವಿಗ್ನ
ಮಂಗಳೂರು : ಸ್ಥಳೀಯ ಬಿಜೆಪಿ ಮುಖಂಡರೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ, ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಲೈ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ಶುಕ್ರವಾರ ನಿರ್ಮಾಣವಾಗಿದೆ.
ಇಂದು ಬೆಳಗ್ಗೆ ಕ್ವಾಲೀಸ್ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ, ಸುಖಾನಂದ ಶೆಟ್ಟಿ ಮೇಲೆ ನಾಡ ಬಂದೂಕಿನಿಂದ ಹಲ್ಲೆ ನಡೆಸಿ, ಪರಾರಿಯಾಯಿತು. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ, ಸುಖಾನಂದ ಶೆಟ್ಟಿ ಕೊನೆ ಉಸಿರೆಳೆದರು. ಅವರ ಕೊಲೆ ವಿಚಾರ ಹರಡುತ್ತಿದ್ದಂತೆಯೇ ಉದ್ರಿಕ್ತ ಸ್ಥಿತಿ ಗ್ರಾಮದಲ್ಲಿ ಸೃಷ್ಟಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಪಿಎಫ್ ಮತ್ತು ಕೆಎಸ್‌ಆರ್‌ಪಿಯ ಎರಡು ತುಕಡಿಗಳನ್ನು ಬಳಸಿಕೊಂಡು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಪ್ರಯತ್ನ ನಡೆಯುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
(ಯುಎನ್‌ಐ)











Click it and Unblock the Notifications