150 ವರ್ಷಗಳ ನಂತರ ಮೈಸೂರಿನ ‘ನಂದಿ’ಗೆ ಮಜ್ಜನ!

Mahabhisheka performed to Nandi statue in Chamundi hills after a gap of 150 yearsಮೈಸೂರು : ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನೆಲೆಸಿರುವ ನಂದಿಗೆ, ಸುಮಾರು 150ವರ್ಷಗಳ ನಂತರ ಮಹಾಮಜ್ಜನದ ಸಂಭ್ರಮ. ಸಾವಿರಾರು ಜನ, ಮಜ್ಜನ ಕಂಡು ಹರ್ಷಗೊಂಡರು.

ವೇದಘೋಷ, ಮಂಗಳವಾದ್ಯಗಳ ನಡುವೆ, ಶ್ರೀಗಂಧ, ಜೇನುತುಪ್ಪ, ಎಳನೀರು, ಮೊಸರು, ಅರಿಶಿಣ ಮತ್ತು ಪಂಚಾಮೃತದ ಜಳಕದಿಂದ, ನಂದಿ ವಿಗ್ರಹಕ್ಕೆ ಸೋಮವಾರ ಹೊಸ ರಂಗು ಬಂದಿತ್ತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.

16ಅಡಿ ಎತ್ತರದ ಈ ಏಕಶಿಲೆಯ ನಂದಿ, ದೇಶದಲ್ಲಿಯೇ ಎರಡನೇ ದೊಡ್ಡ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಂಜಾವೂರಿನಲ್ಲಿ ಅತಿ ದೊಡ್ಡ ನಂದಿ ವಿಗ್ರಹವಿದೆ.

1664ರಲ್ಲಿ ಮೈಸೂರು ಅರಸರಾದ ದೊಡ್ಡರಾಜ ಒಡೆಯರ್‌, ಚಾಮುಂಡಿಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿದರು. ಅದೇ ಸಂದರ್ಭದಲ್ಲಿ, ನಂದಿ ವಿಗ್ರಹದ ಪ್ರತಿಷ್ಠಾಪನೆಯೂ ನೆರವೇರಿತು.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+