ತಿಪಟೂರು ಬಳಿ ರೈಲು ಅಪಘಾತ, ಮೂವರ ದುರ್ಮರಣ
ಬೆಂಗಳೂರು : ರೈಲ್ವೆ ಕ್ರಾಸ್ ದಾಟುತ್ತಿದ್ದ ಆಟೋ ರಿಕ್ಷಾಕ್ಕೆ ಯಶವಂತಪುರ-ದಾದರ್ ಚಾಲುಕ್ಯ ಎಕ್ಸ್‌ಪ್ರೆಸ್ ಟ್ರೆೃನ್ ಡಿಕ್ಕಿ ಹೊಡೆದು, ಮಂಗಳವಾರ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ಸಮೀಪ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
ರೈಲ್ವೆ ಕ್ರಾಸನ್ನು ಆತುರದಿಂದ ಆಟೋ ಚಾಲಕ ದಾಟಿದ್ದೆ, ದುರಂತಕ್ಕೆ ಮೂಲ ಕಾರಣ. ಅಪಘಾತದಲ್ಲಿ ತೀವ್ರವಾಗ ಗಾಯಗೊಂಡ ಒಬ್ಬಾತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಬಗ್ಗೆ ಹೆಚ್ಚಿನ ವಿವರಗಳು ಈವರೆಗೆ ತಿಳಿದುಬಂದಿಲ್ಲ.
(ಯುಎನ್‌ಐ)












Click it and Unblock the Notifications