ಪಟಾಕಿ ದುರಂತ : 200 ಮಂದಿಗೆ ಕತ್ತಲಾದ ದೀಪಾವಳಿ!
ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿಗೆ ತೆರೆ ಬಿದ್ದಿದೆ.. ಈ ಸಲದ ದೀಪಾವಳಿ ಬೆಳಕಿನ ಜೊತೆಗೆ, ಅನೇಕರ ಪಾಲಿಗೆ ಕತ್ತಲೆಯನ್ನೂ ತಂದಿದೆ! ಪಟಾಕಿ ದುರಂತಗಳ ಸಂಖ್ಯೆ ಈ ವರ್ಷ ಕಡಿಮೆಯೇನಿಲ್ಲ.
ಈ ವರ್ಷ ನಗರದ 200ಕ್ಕೂ ಅಧಿಕ ಮಂದಿ ಪಟಾಕಿಗಳಿಂದ ಗಾಯಗೊಂಡಿದ್ದಾರೆ. ಇವರಲ್ಲಿ ಸುಮಾರು 15ರಿಂದ 20ಮಂದಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಗಾಯಾಳುಗಳಲ್ಲಿ ಮಕ್ಕಳ ಸಂಖ್ಯೆ ದೊಡ್ಡದು.
ದಾರಿಯಲ್ಲಿ ನಡೆದು ಹೋಗುತ್ತಿದ್ದವರು, ಪಟಾಕಿ ಸಿಡಿಸುವುದನ್ನು ವೀಕ್ಷಿಸುತ್ತಿದ್ದವರೂ ಸಹಾ ಪಟಾಕಿ ಸ್ಫೋಟದಿಂದ ಗಾಯಗೊಂಡಿದ್ದಾರೆ. ಪಟಾಕಿ ಕಿಡಿಯಿಂದ ಗುಡಿಸಲುಗಳು, ತೆಂಗಿನಮರಗಳು ಭಸ್ಮವಾದ ಘಟನೆಗಳು ವರದಿಯಾಗಿವೆ.
ಮಿಂಟೋ, ವಿಕ್ಟೋರಿಯಾ, ನಾರಾಯಣ ನೇತ್ರಾಲಯ, ಮೋದಿ ಸೇರಿದಂತೆ ನಗರದ ಅನೇಕ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications