ಸಂಪುಟ ಕಸರತ್ತು : ಅಂಬರೀಷ್‌ಗೆ ಕೇಂದ್ರ ಸಚಿವ ಸ್ಥಾನ?
ನವದೆಹಲಿ : ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ, ಮಂಗಳವಾರ ರಾತ್ರಿ ಅಥವಾ ಬುಧವಾರ ನಡೆಯುವ ಸಾಧ್ಯತೆಗಳಿವೆ.
ಈ ಸಲದ ಸಂಪುಟ ವಿಸ್ತರಣೆಯಲ್ಲಿ ಮಂಡ್ಯ ಸಂಸದ ಮತ್ತು ನಟ ಅಂಬರೀಷ್‌ಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳಿವೆ. ಕಳೆದ ಸಲ ಅಂತಿಮ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘಟನೆಗಳು ಒತ್ತಡ ಹೇರಿವೆ.
ಕಳೆದ ಎನ್‌ಡಿಎ ಸರ್ಕಾರ ಮತ್ತು ಈಗಿನ ಯುಪಿಎ ಸರ್ಕಾರದ ಸಂಪುಟದಲ್ಲಿ ಒಕ್ಕಲಿಗ ಸಚಿವರಿಲ್ಲ. ಒಕ್ಕಲಿಗರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಅಸಮಾಧಾನಗಳ ಹಿನ್ನೆಲೆಯಲ್ಲಿ, ಅಂಬರೀಷ್‌ಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿದೆ ಎನ್ನಲಾಗಿದೆ.
ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ವಿದೇಶಾಂಗ ಸಚಿವ ಸ್ಥಾನ ಪ್ರಣಬ್ ಮುಖರ್ಜಿ ಅವರಿಗೆ ಸಿಗಲಿದೆ(ನಟವರ್ ಸಿಂಗ್ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು). ಹಾಲಿ ಗೃಹ ಸಚಿವ ಶಿವರಾಜ್ ಪಾಟೀಲ್‌ಗೆ ರಕ್ಷಣಾ ಖಾತೆ ಹೆಚ್ಚುವರಿಯಾಗಿ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
(ಏಜನ್ಸೀಸ್)












Click it and Unblock the Notifications