ರಸ್ತೆ ಅಪಘಾತ : ಬೆಂಗಳೂರಿನ ಐವರು ಯುವಕರ ಸಾವು
ದಾವಣಗೆರೆ : ದೀಪಾವಳಿ ರಜೆ ಸವಿಯಲು ಗೋವಾಕ್ಕೆ ಹೊರಟ್ಟಿದ್ದ ನಗರದ ಐಟಿ ಉದ್ಯೋಗಿಗಳು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಪಯಣಿಸುತ್ತಿದ್ದ ಕ್ವಾಲೀಸ್ ವ್ಯಾನ್‌ಗೆ ಶುಕ್ರವಾರ ಖಾಸಗಿ ಬಸ್ ಡಿಕ್ಕಿ ಹೊಡೆದು, ವ್ಯಾನ್‌ನಲ್ಲಿದ್ದ ಐವರು ಮೃತಪಟ್ಟಿದ್ದಾರೆ.
ಅನಗೋಡು ಬಳಿ ಸಂಭವಿಸಿರುವ ವಾಹನ ಅಪಘಾತದಲ್ಲಿ , ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ವ್ಯಾನ್ ಮತ್ತು ತುಮಕೂರಿನಿಂದ ದಾವಣಗೆರೆಗೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಗಾಯಾಳುಗಳನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ವಂಶಿ(22), ರಮೇಶ್(23), ಕುಮಾರ್(23), ಶ್ರೀಕಾಂತ್(24), ಅಭಿಷೇಕ್(23) ಎಂದು ಗುರ್ತಿಸಲಾಗಿದೆ. ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
(ಯುಎನ್‌ಐ)












Click it and Unblock the Notifications