ಈರುಳ್ಳಿ ರೈತರು ಉಳಿದರು; ಕೊಬ್ಬರಿ, ಅಡಿಕೆ ರೈತರ ಕತೆ?
ಬೆಂಗಳೂರು : ಕೊಬ್ಬರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ತಿಪಟೂರು ರೈತರು, ಅಡಿಕೆ ಬೆಲೆ ಕುಸಿಯಿತಲ್ಲ ಎಂದು ಮಲೆನಾಡ ರೈತರು, ಈರುಳ್ಳಿ ಬೆಳೆದು ಕಣ್ಣೀರು ಹಾಕುತ್ತಿದ್ದೇವೆ ಎಂದು ಉತ್ತರ ಕರ್ನಾಟಕದ ರೈತರು ಒಂದೇ ಕಣ್ಣಲ್ಲಿ ಅಳುತ್ತಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಿ, ರೈತರಲ್ಲಿ ಧೈರ್ಯ ತುಂಬಿದೆ.
ಮಾರುಕಟ್ಟೆ ಮಧ್ಯಪ್ರವೇಶ ಮಾಡಿರುವ ರಾಜ್ಯ ಸರ್ಕಾರ, ಬೆಂಬಲ ಬೆಲೆ ನೀಡಿ ರೈತರಿಂದ ಈರುಳ್ಳಿ ಖರೀದಿಸಲು ಮುಂದಾಗಿದೆ. ಈ ಪ್ರಕ್ರಿಯೆ ಮುಂದಿನ ಒಂದೆರಡು ದಿನಗಳಲ್ಲಿ ಜಾರಿಗೆ ಬರಲಿದೆ. ಇದಕ್ಕಾಗಿ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಥಮ ದರ್ಜೆ ಈರುಳ್ಳಿಗೆ ಕ್ವಿಂಟಾಲ್‌ಗೆ 400 ರೂ., ಎರಡನೇ ದರ್ಜೆಗೆ 270 ರೂ. ಹಾಗೂ ಮೂರನೇ ದರ್ಜೆಗೆ 100 ರೂ. ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications