ಅಧಿಕೃತ ಪ್ರೆಸ್ ಸ್ಟಿಕರ್ ವಿತರಣೆಗೆ ವಾರ್ತಾ ಇಲಾಖೆ ಕ್ರಮ
ಅಧಿಕೃತ ಪ್ರೆಸ್ ಸ್ಟಿಕರ್ ವಿತರಣೆಗೆ ವಾರ್ತಾ ಇಲಾಖೆ ಕ್ರಮ
ನಕಲಿ ಪತ್ರಕರ್ತರಿಗೆ ಕೆ.ವಿ.ಆರ್. ಟಾಗೋರ್ ಅವರಿಂದ ಎಚ್ಚರಿಕೆ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರೆಸ್ ಸ್ಟಿಕರ್‌ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳ್ಳ ಸರಕನ್ನು ಟ್ರಾನ್ಸ್‌ಪೋರ್ಟ್ ಮಾಡಲು ಅನುಕೂಲವಾಗಲೆಂದು, ಪ್ರೆಸ್ ಸ್ಟಿಕರ್‌ಗಳನ್ನು ವಾಹನಗಳಿಗೆ ಅಂಟಿಸಿದ ಉದಾಹರಣೆಗಳೂ ಇವೆ. ಇವೆಲ್ಲಕ್ಕೂ ಕಡಿವಾಣ ಹಾಕಲು ಇಲಾಖೆ ಚಿಂತನೆ ನಡೆಸಿದೆ ಎಂದರು.
ಅಧಿಕೃತ ಪತ್ರಿಕೆಗಳ ಸಂಪಾದಕರಿಂದ ವಾಹನಗಳ ವಿವರವನ್ನು ಸಂಗ್ರಹಿಸಿ, ಪ್ರೆಸ್ ಸ್ಟಿಕರ್ ವಿತರಿಸಲಾಗುವುದು. ಅಲ್ಲದೇ ನಕಲಿ ಗುರ್ತಿನ ಚೀಟಿ ಹೊಂದಿ, ಸಾರ್ವಜನಿಕರನ್ನು ವಂಚಿಸುವ ಪತ್ರಕರ್ತರ ವಿರುದ್ಧ ಕ್ರಮ ಜರುಗಿಸುವುದಾಗಿ ಅವರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications