ಅಂಚೆಯಣ್ಣನಿಗೆ ಸಕತ್ ಬೆಣ್ಣೆ ಹಚ್ಚಿ ; ಸಾಲ ಪಡೆಯಿರಿ!
ಅಂಚೆಯಣ್ಣನಿಗೆ ಸಕತ್ ಬೆಣ್ಣೆ ಹಚ್ಚಿ ; ಸಾಲ ಪಡೆಯಿರಿ!
ಪೋಸ್ಟ್‌ಮನ್ ಅಕ್ಷಯ ಯೋಜನೆಗೆ ಮೀರಾ ದತ್ತ ಅವರಿಂದ ಚಾಲನೆ
ಟಿವಿಎಸ್ ಹಣಕಾಸು ಸಂಸ್ಥೆ ಜೊತೆ ಅಂಚೆ ಇಲಾಖೆ ಕೈಜೋಡಿಸಿ, ಪೋಸ್ಟ್‌ಮನ್ ಅಕ್ಷಯ ಎಂಬ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಿದೆ. ಈ ಸಮಾರಂಭದಲ್ಲಿ ಮಾತನಾಡಿದ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಮೀರಾ ದತ್ತ, ಈ ಯೋಜನೆಗಾಗಿ 203 ಪೋಸ್ಟ್‌ಮನ್‌ಗಳು ತರಬೇತಿ ಪಡೆದಿದ್ದಾರೆ ಎಂದರು.
ಪ್ರಾಯೋಗಿಕವಾಗಿ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಯೋಜನೆ ಆರಂಭಿಸಲಾಗಿದೆ. ಸಾಲದ ಬಗ್ಗೆ ವಿವರ, ಸಾಲ ಪಡೆಯಲು ಅಗತ್ಯನೆರವನ್ನು ಪೋಸ್ಟ್‌ಮನ್‌ಗಳು ನೀಡಲಿದ್ದಾರೆ.
ಅಂಚೆ ಇಲಾಖೆ ಮೇಲೆ ಪ್ರತಿ ವರ್ಷ 1300 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಅದನ್ನು ಇಂತಹ ಯೋಜನೆಗಳ ಮೂಲಕ ಭರ್ತಿ ಮಾಡಿಕೊಳ್ಳಲು ಇಲಾಖೆ ನಿರ್ಧರಿಸಿದೆ. ರಾಜ್ಯದ 9000 ಅಂಚೆ ಕಚೇರಿಗಳಲ್ಲಿ 7000 ಪೋಸ್ಟ್‌ಮನ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications