ಕುಮಾರ ಸಂಧಾನ : ಸರ್ಕಾರಿ ನೌಕರರ ಮುಷ್ಕರಕ್ಕೆ ತೆರೆ
ಕುಮಾರ ಸಂಧಾನ : ಸರ್ಕಾರಿ ನೌಕರರ ಮುಷ್ಕರಕ್ಕೆ ತೆರೆ
ಬೇಡಿಕೆ ಪೂರೈಸಲು ಸರ್ಕಾರದ ಭರವಸೆ, ಕರ್ತವ್ಯಕ್ಕೆ ಹಾಜರಾಗಲು ಸಂಘದಿಂದ ಮನವಿ
ತಮ್ಮ ಬಹುದಿನಗಳ ಬೇಡಿಕೆಗಳ ಈಡೇರಿಕೆಗಾಗಿ ಗುರುವಾರ ಬೆಳಗ್ಗೆ ನೌಕರರು ಮುಷ್ಕರ ಆರಂಭಿಸಿದ್ದರು. ಸಂಘದ ಮುಖಂಡರೊಂದಿಗೆ ಸರ್ಕಾರ ಇಂದು ನಡೆಸಿದ ಮಾತುಕತೆ ಫಲ ನೀಡಿದೆ. ನೌಕರರ ಬೇಡಿಕೆಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಂಘದ ಅಧ್ಯಕ್ಷ ಎಚ್.ಎನ್.ಶೇಷೇಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತ, ಸರ್ಕಾರ ನಮ್ಮ ಬೇಡಿಕೆಗಳನ್ನು ಪೂರೈಸುವುದಾಗಿ ಆಶ್ವಾಸನೆ ನೀಡಿದೆ. ಮುಷ್ಕರವನ್ನು ಸಂಘ ವಾಪಸ್ಸು ಪಡೆದಿದ್ದು, ನೌಕರರು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿರುವುದಾಗಿ ಹೇಳಿದರು.
(ಯುಎನ್‌ಐ)
ಮುಖಪುಟ / ವಾರ್ತೆಗಳು












Click it and Unblock the Notifications