ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರವ್‌ ನಾಯಕತ್ವ ತ್ಯಜಿಸಲಿ : ಗ್ರೆಗ್‌ ಚಾಪೆಲ್‌ ಪಟ್ಟು

By Staff
|
Google Oneindia Kannada News

ಸೌರವ್‌ ನಾಯಕತ್ವ ತ್ಯಜಿಸಲಿ : ಗ್ರೆಗ್‌ ಚಾಪೆಲ್‌ ಪಟ್ಟು
ಮುಂದುವರಿದ ನಾಯಕ-ಕೋಚ್‌ ವಿರಸ, ಗುಟ್ಟು ಬಿಟ್ಟುಕೊಡದ ಬಿಸಿಸಿಐ

ನವದೆಹಲಿ : ಸೌರವ್‌ ಗಂಗೂಲಿ ಮಾನಸಿಕ ಮತ್ತು ದೈಹಿಕ ಅರ್ಹತೆ ಕಳೆದುಕೊಂಡಿರುವುದರಿಂದ ಅವರನ್ನು ಭಾರತ ತಂಡದ ನಾಯಕತ್ವದಿಂದ ಕೈಬಿಡಬೇಕು ಎಂದು ಭಾರತ ತಂಡದ ಕೋಚ್‌ ಗ್ರೆಗ್‌ ಚಾಪೆಲ್‌, ಬಿಸಿಸಿಐ(ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಗೆ ಇ-ಮೇಲ್‌ ಕಳುಹಿಸಿರುವುದಾಗಿ ಪತ್ರಿಕೆಯಾಂದು ವರದಿ ಮಾಡಿದೆ.

ಪ್ರಮುಖ ಬಂಗಾಲಿ ಪತ್ರಿಕೆ ಆನಂದ ಬಜಾರ್‌ ಪತ್ರಿಕಾ ಶುಕ್ರವಾರ ತನ್ನ ಮುಖಪುಟದಲ್ಲಿ ಈ ಕುರಿತು ವಿವರವಾದ ಸುದ್ದಿ ಪ್ರಕಟಿಸಿದೆ. ಸೌರವ್‌ ಅವರಲ್ಲಿ ಉತ್ಸಾಹ ತುಂಬುವ ಪ್ರಯತ್ನ ಮಾಡಿದ್ದೇನೆ, ಆದರೆ ಅವರು ತಂಡದ ನಾಯಕನಾಗಿ ಮುಂದುವರಿಯಲು ಬೇಕಾಗುವ ಗೌರವ-ಭರವಸೆಗಳನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಅವರನ್ನು ನಾಯಕತ್ವದಿಂದ ಕೈಬಿಡಬೇಕು. ಇಲ್ಲವಾದರೆ ಕೋಚ್‌ ಸ್ಥಾನದಿಂದ ನಾನೇ ನಿರ್ಗಮಿಸಬೇಕಾಗುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸೌರವ್‌ ನಾಯಕತ್ವದ ಕಿರೀಟ ಉಳಿಸಿಕೊಳ್ಳಲು, ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಅಲ್ಲದೇ ಗಾಯದ ಸಮಸ್ಯೆಯಾಡ್ಡಿ ಪದೇ ಪದೇ ವಿಶ್ರಾಂತಿ ಪಡೆಯುತ್ತಿದ್ದಾರೆ. ವಾಸ್ತವವಾಗಿ ಅವರ ಗಾಯದ ಸಮಸ್ಯೆ ಕಪೋಲಕಲ್ಪಿತ. ಭಾರತ 2007ರ ವಿಶ್ವಕಪ್‌ ಕಿರೀಟ ಧರಿಸಿಕೊಳ್ಳಬೇಕಾದರೆ, ಸೌರವ್‌ ಇಂತಹ ಮನೋಭಾವ ತೊರೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ನಾಯಕ-ಕೋಚ್‌ ನಡುವಿನ ವಿರಸ ನಿರ್ಣಾಯಕ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ರಣಬೀರ್‌ಸಿಂಗ್‌ ಮಹೇಂದ್ರ ಅವರನ್ನು ಪ್ರಶ್ನಿಸಿದಾಗ, ನನಗೆ ಇ-ಮೇಲ್‌ ಬಂದಿರುವುದು ನಿಜ. ಅದು ಗೌಪ್ಯವಾದುದು, ಹಾಗಾಗಿ ಅದರ ರಹಸ್ಯಗಳನ್ನು ಬಯಲು ಮಾಡಲಾರೆ ಎಂದು ಹೇಳಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X