ಸಮ್ಮಿಶ್ರ ಸರ್ಕಾರದ ಕೂಸಿಗೆ ಮೊದಲ ಹುಟ್ಟು ಹಬ್ಬ!

ಸಮ್ಮಿಶ್ರ ಸರ್ಕಾರದ ಕೂಸಿಗೆ ಮೊದಲ ಹುಟ್ಟು ಹಬ್ಬ!
ಇದು ಸಮ್ಮಿಶ್ರ ಸರ್ಕಾರವಲ್ಲ , ದಿನಕೂಲಿ ಸರ್ಕಾರ -ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು : ಎಣ್ಣೆ-ಸೀಗೇಕಾಯಿಯಂತಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಸಮ್ಮಿಶ್ರ ಸರ್ಕಾರ ಒಂದು ವರ್ಷವನ್ನು ಶನಿವಾರ ಪೂರ್ಣಗೊಳಿಸಿದೆ.

ಸಮ್ಮಿಶ್ರ ಸರ್ಕಾರದ ಸಾಧನೆಗಳಿಗೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಅಂಕಗಳನ್ನು ನೀಡಿದ್ದರೆ, ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ‘ಇದು ಸಮ್ಮಿಶ್ರ ಸರ್ಕಾರವಲ್ಲ , ದಿನಕೂಲಿ ಸರ್ಕಾರ’ ಎಂದು ಗೇಲಿ ಮಾಡಿದ್ದಾರೆ.

ಸದನದಲ್ಲಿ ಕೈಸೇರಿಸಿ, ಬೀದಿಯಲ್ಲಿ ಜಗಳವಾಡುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಧೋರಣೆಗಳ ಬಗ್ಗೆ ಜನರಲ್ಲಿ ಅತೃಪ್ತಿ ಇದೆ. ಭೂಹಗರಣವನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಪರಸ್ಪರ ಕೆಸರು ಎರಚಿಕೊಂಡದ್ದನ್ನು ಸಹಾ ಜನ ಕಂಡಿದ್ದಾರೆ.

ಸರ್ಕಾರದ ಸಾಧನೆ ಬಣ್ಣಿಸಲು ಜೂನ್‌ನಲ್ಲಿ ಬೃಹತ್‌ ಸಮಾರಂಭ ನಡೆಸಲು ಸರ್ಕಾರ ಸಜ್ಜಾಗಿದೆ. ಸಾಧನೆಗಿಂತಲೂ ಎರಡೂ ಪಕ್ಷಗಳ ಮುಖಂಡರನ್ನು ಸಮಾಧಾನಿಸುವುದರಲ್ಲೇ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಸುಸ್ತಾಗಿದ್ದಾರೆ.

ಪ್ರತಿಪಕ್ಷವಾದ ಬಿಜೆಪಿ ತನ್ನ ಆಂತರಿಕ ಕಲಹಗಳ ಮಧ್ಯೆ ಪ್ರತಿಪಕ್ಷವೆನ್ನುವುದನ್ನೇ ಮರೆತುಬಿಟ್ಟಿದೆ. ಆ ಕೆಲಸವನ್ನು ಆಡಳಿತ ಪಕ್ಷದ ಪಾಲುದಾರರಾಗಿಯೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನಿರ್ವಹಿಸಿದ್ದಾರೆ.

ಉಪಚುನಾವಣೆಗಳು ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎರಡೂ ಪಕ್ಷಗಳು ಹೇಳುತ್ತಿವೆ. ಚುನಾವಣೆ ಎದುರಿಸಲು ಕಾರ್ಯಕರ್ತರು ಸಿದ್ಧರಿದ್ದರೂ, ಶಾಸಕರು ಸಿದ್ಧರಿಲ್ಲ ! ಕಾಂಗ್ರೆಸ್‌ ಹೈಕಮಾಂಡ್‌ ಧರ್ಮಸಿಂಗ್‌ರ ಧೋರಣೆಗಳನ್ನು ದೂರದಿಂದಲೇ ಗಮನಿಸುತ್ತಿದ್ದು, ಚುನಾವಣೆಯ ಲೆಕ್ಕಾಚಾರವನ್ನು ಹಾಕುತ್ತಿದೆ.

ಸರ್ಕಾರದ ಸಾಧನೆಯ ಮಟ್ಟಿಗೆ ಹೇಳುವುದಾದರೆ, ‘ಮೂರಕ್ಕೆ ಇಳಿಯಲಿಲ್ಲ, ಆರಕ್ಕೆ ಏರಲಿಲ್ಲ’.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+