ದೇವೇಗೌಡ್ರೇ ಲಕ್ಷ್ಣಣರೇಖೆ ದಾಟಬೇಡಿ - ಪೂಜಾರಿ
ದೇವೇಗೌಡ್ರೇ ಲಕ್ಷ್ಣಣರೇಖೆ ದಾಟಬೇಡಿ - ಪೂಜಾರಿ
ಗೌಡರ ಪರಿವಾರದ ಆಸ್ತಿಪಾಸ್ತಿಯ ತನಿಖೆಗೆ ಕೆಪಿಸಿಸಿ ಆಗ್ರಹ
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಬೆಂಗಳೂರು ವ್ಯಾಪ್ತಿಯಲ್ಲಿನ ಭೂಕಬಳಿಕೆ ಬಗ್ಗೆ ಬಗೆಗೆ ದೇವೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದರು.
ಭೂಕಬಳಿಕೆದಾರರ ಬಗ್ಗೆ ಮುಖ್ಯಮಂತ್ರಿಗಳು ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಭಾವನೆಯನ್ನು ಜನರ ಮನಸ್ಸಲ್ಲಿ ಮೂಡಿಸಲು ದೇವೇಗೌಡರು ಹೀಗೆ ಮಾಡುತ್ತಿದ್ದಾರೆ. ರಾಜಧಾನಿ ನಗರದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಹೊಂದಿರುವ ಆಸ್ತಿ ಬಗ್ಗೆ ತನಿಖೆಯಾಗಲಿ ಎಂದು ಗೌಡರು ಒತ್ತಾಯಿಸುತ್ತಾರೆ. ಅದರ ಜೊತೆಗೆ ದೇವೇಗೌಡರು ಮತ್ತು ಅವರ ಪುತ್ರರು ಹೊಂದಿರುವ ಆಸ್ತಿಯ ತನಿಖೆಯೂ ಆಗಲಿ ಎಂದು ಪೂಜಾರಿ ಒತ್ತಾಯಿಸಿದರು.
ದೇವೇಗೌಡ ಪತ್ರ ಬರೆದಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಸರಿಯಲ್ಲ. ಮತ್ತು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದು ಸಲ್ಲದು. ಸಮ್ಮಿಶ್ರ ಸಕಾರ ಸುಭದ್ರವಾಗಿದೆ ಎಂದು ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications