ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ರಂಗಭೂಮಿ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

By Staff
|
Google Oneindia Kannada News

ಕನ್ನಡ ರಂಗಭೂಮಿ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ರಾಜ್ಯದಲ್ಲಿ ಕನ್ನಡ ಭಾಷೆಯ ರೆಪರ್ಟಿರಿ, ರಾಷ್ಟ್ರೀಯ ನಾಟಕ ಶಾಲೆ, ರಂಗಶಿಕ್ಷಣ ಆರಂಭಿಸಲು ಒತ್ತಾಯ

ಬೆಂಗಳೂರು : ಕನ್ನಡ ರಂಗಭೂಮಿಯತ್ತ ಕೇಂದ್ರ ಸರ್ಕಾರ ತೋರುತ್ತಿರುವ ಮಲ ತಾಯಿ ಧೋರಣೆಯನ್ನು ಖಂಡಿಸಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಂಗಕಲಾವಿದರ ಕ್ರಿಯಾ ಸಮಿತಿ, ಭಾನುವಾರ(ಮಾ. 27) ಅಂತರಾಷ್ಟ್ರೀಯ ರಂಗಭೂಮಿ ದಿನಾಚರಣೆಯಂದೇ ನಗರದ ಟೌನ್‌ಹಾಲ್‌ ಮುಂಭಾಗದಲ್ಲಿ ಧರಣಿ ನಡೆಸಲಿದೆ.

ಹಿಂದಿ ಬಾರದ ಕನ್ನಡ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ನಾಟಕ, ರೆಪರ್ಟರಿ, ಶಿಕ್ಷಣ, ರಂಗಭೂಮಿಯಲ್ಲಿ ಅವಕಾಶ ನಿರಾಕರಿಸಲಾಗುತ್ತಿದೆ. ದೆಹಲಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದಲ್ಲಿಯೂ ಕನ್ನಡ ಭಾಷೆಯ ರೆಪರ್ಟಿರಿ, ರಾಷ್ಟ್ರೀಯ ನಾಟಕ ಶಾಲೆ, ಶಿಕ್ಷಣದಲ್ಲಿ ರಂಗಭೂಮಿ ಆರಂಭಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ರಂಗಕಲಾವಿದರ ಪ್ರತಿಭಟನೆ-ಧರಣಿ ರಾಜ್ಯದ ಲ್ಲಾ ನಗರಗಳಲ್ಲೂ ಮಾ.27ರಂದು ಏಕಕಾಲದಲ್ಲಿ ಆರಂಭವಾಗಲಿದೆ ಎಂದು ಸಮಿತಿಯ ಖ್ಯಾತ ನಿರ್ದೇಶಕ ಟಿ.ಎಸ್‌.ನಾಗಾಭರಣ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಮುಖ್ಯಮಂತ್ರಿ ಚಂದ್ರು, ರಂಗ ಅಭಿನೇತ್ರಿ ಚಿಂದೋಡಿ ಲೀಲಾ, ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್‌ ಜಿ. ಕಪ್ಪಣ, ಮಾಜಿ ಅಧ್ಯಕ್ಷ ಆರ್‌. ನಾಗೇಶ್‌, ರಂಗ ನಿರ್ದೇಶಕ ಪ್ರಸನ್ನ ಸೇರಿದಂತೆ ಇತರರು ಹಾಜರಿದ್ದರು. (ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X