ಶೇಣಿ, ಸತ್ಯು, ಕಯ್ಯಾರರಿಗೆ ಮಂಗಳೂರು ವಿ.ವಿ.ಗೌರವ ಡಾಕ್ಟರೇಟ್
ಶೇಣಿ, ಸತ್ಯು, ಕಯ್ಯಾರರಿಗೆ ಮಂಗಳೂರು ವಿ.ವಿ.ಗೌರವ ಡಾಕ್ಟರೇಟ್
ರಾಜ್ಯಪಾಲ ಚತುರ್ವೇದಿ ಅವರಿಂದ ಗೌರವ ಪ್ರದಾನ
ಶೇಣಿ ಗೋಪಾಲಕೃಷ್ಣ ಭಟ್, ಕಯ್ಯಾರ ಕಿಞ್ಞಣ್ಣ ರೈ ಮತ್ತು ಎಂ.ಎಸ್.ಸತ್ಯು ಗೌರವ ಡಾಕ್ಟರೇಟ್ ಪುರಸ್ಕೃತರು. ಜನವರಿ 24ರ ಸೋಮವಾರ ಮಂಗಳ ಗಂಗೋತ್ರಿಯಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಚತುರ್ವೇದಿ ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಿದರು.
ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಮೊದಲ ಯಕ್ಷಗಾನ ಕಲಾವಿದ ಎನ್ನುವ ಹಿರಿಮೆ 88 ವರ್ಷದ ಶೇಣಿ ಗೋಪಾಲಕೃಷ್ಣ ಭಟ್ ಅವರದಾಗಿದೆ. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಹೋರಾಟದಲ್ಲಿ ಹಣ್ಣಾದ ಕಯ್ಯಾರರು ಯಾರಿಗೆ ಗೊತ್ತಿಲ್ಲ ? ಅವರಿಗೀಗ 89. ಶಿಕ್ಷಕರಾಗಿ, ಲೇಖಕರಾಗಿ ಕಯ್ಯಾರರ ಸಾಧನೆ ದೊಡ್ಡದು.
ಎಪ್ಪತ್ನಾಲ್ಕು ವರ್ಷದ ಎಂ.ಎಸ್. ಸತ್ಯು ಸಿನಿಮಾ ನಿರ್ದೇಶಕರಾಗಿ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications