ಮೈಸೂರು, ಹಾಸನ, ಗುಲ್ಪರ್ಗಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ -ಸಿಂಧ್ಯ

ಮೈಸೂರು, ಹಾಸನ, ಗುಲ್ಪರ್ಗಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ -ಸಿಂಧ್ಯ
ನಾಲ್ಕು ಖಾಸಗಿ ಕಂಪನಿಗಳಿಗೆ ಉಕ್ಕು ಮತ್ತು ಕಬ್ಬಿಣದ ಗಣಿಗಾರಿಕೆಗೆ ಪರವಾನಗಿ

ಬೆಂಗಳೂರು : ರಾಜ್ಯ ಸರಕಾರ ಮೈಸೂರು, ಹಾಸನ ಮತ್ತು ಗುಲ್ಪರ್ಗದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಕೈಗಾರಿಕಾ ಸಚಿವ ಪಿ.ಜಿ.ಆರ್‌.ಸಿಂಧ್ಯ ಹೇಳಿದರು.

ಸೋಮವಾರ(ಜ.24)ನಡೆದ ವಿಧಾನ ಪರಿಷತ್‌ ಅಧಿವೇಶನದಲ್ಲಿ ಕೆ.ಸಿ.ಕೊಂಡಯ್ಯ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಳ್ಳಾರಿಯಲ್ಲಿನ ಹಳೆಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಬಿಜಾಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು, ಸ್ಥಳಕ್ಕೆ ಭೇಟಿ ನೀಡಿ ಈ ನಿಟ್ಟಿನಲ್ಲಿ ಸಾಧ್ಯತೆಗಳನ್ನು ಪರಿಶೀಲಿಸುತ್ತೇನೆ ಎಂದು ಸಿಂಧ್ಯ ಹೇಳಿದರು.

ಉಕ್ಕು ಮತ್ತು ಕಬ್ಬಿಣ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೆ. ಪ್ರತಾಪಚಂದ್ರ ಶೆಟ್ಟಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ನಾಲ್ಕು ಖಾಸಗಿ ಕಂಪನಿಗಳಿಗೆ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಮೆ.ಕೆನರಾ ಸ್ಟೀಲ್‌ ಲಿ.,(ಮಂಗಳೂರು), ಜೈಪ್ರಕಾಶ್‌ ಸ್ಟೀಲ್‌ ಕಂಪನಿ ಲಿ.,(ಮಂಗಳೂರು), ಕುದುರೆ ಮುಖ್‌ ಐರನ್‌ ಓರ್‌ ಕಂಪನಿ ಲಿ., ಮತ್ತು ಉಷಾ ಐರನ್‌ ಅಂಡ್‌ ಫೆರೋ ಮೆಟಲ್‌ ಕಾರ್ಫೋರೇಷನ್‌ ಕಂಪನಿಗಳಿಗೆ ಉಡುಪಿ, ಪಡುಬಿದ್ರಿಯಲ್ಲಿ ಗಣಿಗಾರಿಕೆಗೆ ಕಳೆದ ಹದಿನೈದು ವರ್ಷಗಳಿಂದ ಪರವಾನಗಿ ನೀಡಲಾಗಿದೆ ಎಂದು ಸಿಂಧ್ಯ ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+