ಮಾಜಿ ಪ್ರಧಾನಿ, ಹಿರಿಯ ಕಾಂಗ್ರೆಸ್ಸಿಗ ಪಿ.ವಿ.ನರಸಿಂಹರಾವ್‌ ನಿಧನ

ಮಾಜಿ ಪ್ರಧಾನಿ, ಹಿರಿಯ ಕಾಂಗ್ರೆಸ್ಸಿಗ ಪಿ.ವಿ.ನರಸಿಂಹರಾವ್‌ ನಿಧನ
ನೆಹರೂ ಕುಟುಂಬದವರ ನಂತರ 5 ವರ್ಷ ಪ್ರಧಾನಿಯಾಗಿದ್ದ ಮೊದಲಿಗ ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಎಐಐಎಂಎಸ್‌) ಗುರುವಾರ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು .

ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ನರಸಿಂಹರಾವ್‌ ಅವರನ್ನು ಡಿಸೆಂಬರ್‌ 9ರಂದು ಎಐಐಎಂಎಸ್‌ಗೆ ದಾಖಲು ಮಾಡಲಾಗಿತ್ತು . ಅನಾರೋಗ್ಯದಿಂದ ಚೇತರಿಸಿಕೊಳ್ಳದ ರಾವ್‌ ಗುರುವಾರ (ಡಿ.23) ಮಧ್ಯಾಹ್ನ 2.40ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. ಸಾವಿನ ಸಮಯದಲ್ಲಿ ಅವರ ಪುತ್ರ ಪ್ರಭಾಕರ್‌ರಾವ್‌ ಜೊತೆಗಿದ್ದರು ಎಂದು ನರಸಿಂಹರಾವ್‌ ಸಹಾಯಕ ಚೇತನ್‌ಶರ್ಮ ತಿಳಿಸಿದ್ದಾರೆ.

ಮೂವರು ಪುತ್ರರು ಹಾಗೂ ಐವರು ಪುತ್ರಿಯರನ್ನು ನರಸಿಂಹರಾವ್‌ ಅಗಲಿದ್ದಾರೆ. ನರಸಿಂಹರಾವ್‌ ಪುತ್ರ ಪಿ.ವಿ.ರಂಗರಾವ್‌ ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

1991ರಿಂದ 96ರವರೆಗೆ ಪ್ರಧಾನ ಮಂತ್ರಿಯಾಗಿದ್ದ ಪಿ.ವಿ.ನರಸಿಂಹರಾವ್‌, ನೆಹರೂ ಕುಟುಂಬದವರ ನಂತರ ಐದು ವರ್ಷಗಳ ಕಾಲ ಪ್ರಧಾನ ಮಂತ್ರಿ ಪದ ಪೂರೈಸಿದ ಮೊದಲ ಪ್ರಧಾನ ಮಂತ್ರಿ ಎನ್ನುವ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+