ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಿ ಮಿತ್ರರೇ, ಬಿಜೆಪಿ ಜೊತೆ ಕೈಸೇರಿಸಿ-ಜೆಡಿಎಸ್‌ಗೆ ಈಶ್ವರಪ್ಪ ಆಹ್ವಾನ

By Staff
|
Google Oneindia Kannada News

ಬನ್ನಿ ಮಿತ್ರರೇ, ಬಿಜೆಪಿ ಜೊತೆ ಕೈಸೇರಿಸಿ-ಜೆಡಿಎಸ್‌ಗೆ ಈಶ್ವರಪ್ಪ ಆಹ್ವಾನ
ಜನರ ಆಶಯಕ್ಕೆ ಸ್ಪಂದಿಸಿ ಕಾಂಗ್ರೆಸ್ಸೇತರ, ಬಿಜೆಪಿ-ಜೆಡಿಎಸ್‌ ಸರಕಾರ ಸ್ಥಾಪನೆಗೆ ಪ್ರಯತ್ನ

ದಾವಣಗೆರೆ : ಸಮ್ಮಿಶ್ರ ಸರಕಾರದ ಪರಿಣಾಮ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಅಂತರ ದಿನೇದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಾಂದಿಗೆ ಕೈಜೋಡಿಸುವಂತೆ ಜಾತ್ಯಾತೀತ ಜನತಾದಳಕ್ಕೆ ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಮುಕ್ತ ಆಹ್ವಾನ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಆಶಯದಂತೆಯೇ ಕಾಂಗ್ರೆಸ್ಸೇತರ ಪರ್ಯಾಯ ಸರಕಾರವನ್ನು ರಾಜ್ಯದಲ್ಲಿ ರಚಿಸಲು ಮುಂದಾಗಬೇಕಾಗಿದೆ. ಧರ್ಮಸಿಂಗ್‌ ನೇತೃತ್ವದ ಮೈತ್ರಿಕೂಟ ಸರಕಾರ ಶೀಘ್ರದಲ್ಲಿಯೇ ಮುರಿದು ಬೀಳಲಿದೆ ಎನ್ನುವುದು ಎರಡು ಪಕ್ಷಗಳ ಮುಖಂಡರ ವ್ಯತಿರಿಕ್ತ ಹೇಳಿಕೆಗಳಿಂದ ಸ್ಪಷ್ಟವಾಗಿದೆ ಎಂದರು.

ಮತ್ತೊಂದು ಮಧ್ಯಂತರ ಚುನಾವಣೆಯನ್ನು ತಪ್ಪಿಸಲು ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್‌ ಮುಂದಾಗಬೇಕು. ಕಳೆದ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿದ್ದರು. ಆದರೆ ಜೆಡಿಎಸ್‌ನ ತಪ್ಪು ಧೋರಣೆಯಿಂದ ಮತ್ತೆ ಕಾಂಗ್ರೆಸ್‌ ನೇತೃತ್ವದ ಸರಕಾರ ರಾಜ್ಯದಲ್ಲಿದೆ. ಬಿಜೆಪಿ ತತ್ವ-ಸಿದ್ಧಾಂತ ಹಾಗೂ ಐಡಿಯಾಲಜಿ ಬಗೆಗೆ ಜೆಡಿಎಸ್‌ ಮುಖಂಡರಿಗೆ ಕೆಲವು ಅನುಮಾನಗಳಿವೆ.

ರಾಷ್ಟ್ರದ ಸಮಗ್ರ ಪ್ರಗತಿ ಬಿಜೆಪಿಯ ನೀತಿಯಾಗಿದೆ. ಎರಡೂ ಪಕ್ಷಗಳ ಮುಖಂಡರು ಕುಳಿತು, ಚರ್ಚೆ ಮೂಲಕ ಸಂಶಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶಗಳಿವೆ. ಜೆಡಿಎಸ್‌ ಶಾಸಕರು ಬಿಜೆಪಿ ಮೈತ್ರಿಗೆ ಉತ್ಸಾಹ ತೋರಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X