ಕರ್ನಾಟಕ ಸುವರ್ಣ ಜಯಂತಿ ಅದ್ಧೂರಿ ಮಹೋತ್ಸವಕ್ಕೆ ಬೀಜ ಬಿತ್ತನೆ
ಕರ್ನಾಟಕ ಸುವರ್ಣ ಜಯಂತಿ ಅದ್ಧೂರಿ ಮಹೋತ್ಸವಕ್ಕೆ ಬೀಜ ಬಿತ್ತನೆ
2006 ರಲ್ಲಿ ವಿಶ್ವ ಕನ್ನಡ ಸಮ್ಮೇಳನ, ನಾಡಿನೆಲ್ಲೆಡೆ ಕನ್ನ್ನಡದ ಡಿಂಡಿಮ
ಕಂದಾಯ ಸಚಿವ ಎಂ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ವಿಶ್ವಕನ್ನಡ ಸಮ್ಮೇಳನವನ್ನು ಬೆಂಗಳೂರು ಸೇರಿದಂತೆ ಮೈಸೂರು, ಬೆಳಗಾವಿ, ಧಾರವಾಡ ಅಥವಾ ಹಂಪಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ವಿಕಾಸ ಸೌಧನನ್ನು ಸುವರ್ಣ ವಿಕಾಸಸೌಧ ಎಂದು ಮರುನಾಮಕರಣ ಮಾಡುವುದು, ಹಳೇ ಕಾರಾಗೃಹ ಕಟ್ಟಡ ಇರುವ 17 ಎಕರೆ ಜಾಗದಲ್ಲಿ ಅತ್ಯಂತ ಎತ್ತರದ ಗೋಪುರ ಹಾಗೂ ಉದ್ಯಾನ ನಿರ್ಮಿಸಿ ಅದಕ್ಕೆ ಸುವರ್ಣ ಕರ್ನಾಟಕ ಉದ್ಯಾನ ಎಂದು ಹೆಸರಿಡುವುದು, ಧಾರವಾಡ, ಗುಲ್ಪರ್ಗ, ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ಕೋಲಾರದಲ್ಲಿ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ನಿರ್ಮಾಣಕ್ಕಾಗಿ ಎಂಟು ಕೋಟಿ ರೂಪಾಯಿ ಅನುದಾನ ಕೇಳಲು ಸಭೆ ನಿರ್ಣಯಿಸಿತು.
ನಾನಾ ಕಾರ್ಯಕ್ರಮ: ಏಕೀಕರಣ ನಂತರ ಕರ್ನಾಟಕದ ಸಾಂಸ್ಕೃತಿಕ, ವೈಜ್ಞಾನಿಕ,ಭೌತಿಕ ಮತ್ತಿತರ ಕ್ಷೇತ್ರಗಳ ಪ್ರಗತಿಯ ಹಿನ್ನೋಟದ ಕುರಿತಾಗಿ ಸಂಗೀತ, ನೃತ್ಯ, ನಾಟಕಗಳನ್ನು ಸಂಯೋಜಿಸುವ ಬೃಹತ್ ಯೋಜನೆಗೆ ಐದು ಲಕ್ಷ ರೂಪಾಯಿ, ಕನ್ನಡದ 50 ಶ್ರೇಷ್ಠ ಗ್ರಂಥಗಳ ಪ್ರಕಟನೆಗೆ 50 ಲಕ್ಷ ರೂಪಾಯಿ, ಸಂಸ್ಮರಣ ಗ್ರಂಥ ಪ್ರಕಟನೆಗೆ 50 ಲಕ್ಷ , ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಸಾಕ್ಷ್ಯಚಿತ್ರಗಳಿಗಳ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿ ಮೀಸಲಿಡಲು ಸಭೆ ತೀರ್ಮಾನಿಸಿತು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications