ಪ್ರಭುಶಂಕರ್‌ಗೆ ‘ವಿಶ್ವ ಮಾನವ’ ಪ್ರಶಸ್ತಿ
ಪ್ರಭುಶಂಕರ್‌ಗೆ ‘ವಿಶ್ವ ಮಾನವ’ ಪ್ರಶಸ್ತಿ
ಡಾ.ಟಿ. ಸಿ.ಪೂರ್ಣಿಮಾ , ವಿ. ಎನ್. ಸುಬ್ಬರಾವ್ ವಿಶ್ವಮಾನವ ಪ್ರಶಸ್ತಿ ಪಡೆದ ಇನ್ನಿಬ್ಬರು ಗಣ್ಯರು
ಬೆಂಗಳೂರು : ಹಿರಿಯ ಸಾಹಿತಿ ಹಾಗೂ ಕುವೆಂಪು ಅವರ ಅಚ್ಚುಮೆಚ್ಚಿನ ಶಿಷ್ಯ ಡಾ.ಕೆ. ಪ್ರಭುಶಂಕರ ಅವರನ್ನು 2004ನೇ ಸಾಲಿನ ಪ್ರತಿಷ್ಠಿತ ‘ವಿಶ್ವ ಮಾನವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಮೈಸೂರಿನ ಶ್ರೀ ಕುವೆಂಪು ವಿದ್ಯಾ ವರ್ಧಕ ಟ್ರಸ್ಟ್ ಪ್ರತಿವರ್ಷ ಸಾಂಸ್ಕೃತಿಕ-ಸಾಹಿತ್ಯಿಕ ಗಣ್ಯರಿಗೆ ವಿಶ್ವ ಮಾನವ ಪ್ರಶಸ್ತಿಯನ್ನು ನೀಡುತ್ತಿದೆ. 2004ರ ಪ್ರಶಸ್ತಿ ವಿಜೇತ ಹಿರಿಯ ಲೇಖಕ ಪ್ರಭುಶಂಕರ ಅವರಿಗೆ ಪ್ರಶಸ್ತಿ ಪತ್ರ ಹಾಗೂ 25 ಸಾವಿರ ರೂ ನಗದು ನೀಡಿ ಗೌರವಿಸಲಾಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ನೀಡುವ ‘ಶ್ರೀಮತಿ. ಸಾವಿತ್ರಮ್ಮ ದೇಜಗೌ ಪ್ರಶಸ್ತಿ’ಯನ್ನು ಕವಿಯತ್ರಿ ಡಾ.ಟಿ.ಸಿ.ಪೂರ್ಣಿಮಾ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಫಲಕದ ಜೊತೆ 20 ಸಾವಿರ ರೂ ಗಳ ನಗದು ನೀಡಿ ಗೌರವಿಸಲಾಗುವುದು.
ಪ್ರತಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀರಣ್ಣಗೌಡ ಪ್ರಶಸ್ತಿಯನ್ನು ವಿ.ಎನ್ ಸುಬ್ಬರಾವ್ ಅವರಿಗೆ ನೀಡಲಾಗುತ್ತಿದೆ. ಇವರಿಗೆ ಪ್ರಶಸ್ತಿ ಫಲಕದ ಜೊತೆ 10 ಸಾವಿರ ನಗದು ನೀಡಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭವು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಆವರಣದಲ್ಲಿ ಡಿಸೆಂಬರ್ 8ರಂದು ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications