ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿವಿಆರ್‌ ಸಿನಿಮಾಸ್‌-ನಗರದಲ್ಲಿ ಜಾಗತಿಕ ಮಟ್ಟದ ಚಿತ್ರ ಸಂಕೀರ್ಣ

By Staff
|
Google Oneindia Kannada News

ಪಿವಿಆರ್‌ ಸಿನಿಮಾಸ್‌-ನಗರದಲ್ಲಿ ಜಾಗತಿಕ ಮಟ್ಟದ ಚಿತ್ರ ಸಂಕೀರ್ಣ
ಒಂದೇ ಸೂರಿನಲ್ಲಿ ಹನ್ನೊಂದು ಚಿತ್ರಗಳ ಪ್ರದರ್ಶನ, ಪ್ರೇಕ್ಷಕರಿಗೆ ರಾಜ ಮರ್ಯಾದೆ

ಬೆಂಗಳೂರು : ಪ್ರೆಸ್ಟೀಸ್‌ ಗ್ರೂಪ್‌ ನಗರದ ಜನತೆಗೆ ಥ್ರಿಲ್‌ ನೀಡಿದೆ. ಅದರಲ್ಲೂ ಚಿತ್ರರಸಿಕರಿಗಂತೂ ಸುಗ್ಗಿಯೋ ಸುಗ್ಗಿ. ಎಲ್ಲಾ ಭಾಷೆಗಳ ಚಿತ್ರಗಳನ್ನು ಒಂದೇ ವೇದಿಕೆಯಡಿ ವೀಕ್ಷಿಸುವ ಅವಕಾಶ ರಾಜಧಾನಿ ನಗರ ಬೆಂಗಳೂರಲ್ಲಿ ಈಗ ಲಭ್ಯ.

ಇದು ಚಿತ್ರಮಂದಿರವಲ್ಲ. ಚಿತ್ರಮಂದಿರಗಳ ಸರಪಣಿ. ನಗರದ ಕೋರಮಂಗಲದ ದಿ ಪೋರಂ ಮಾಲ್‌ ಕಟ್ಟಡದ ಮೂರನೇ ಅಂತಸ್ತಿನಲ್ಲಿದೆ. ಪಿವಿಆರ್‌ ಸಿನಿಮಾಸ್‌ಗೆ ಶುಕ್ರವಾರ(ನ.26) ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಚಾಲನೆ ನೀಡಿದ್ದಾರೆ. ಹೈಟೆಕ್‌ಸಿಟಿಯಾಗಿ ಪರಿವರ್ತಿತಗೊಂಡಿರುವ ಉದ್ಯಾನ ನಗರಿಗೆ ಪಿವಿಆರ್‌ ಸಿನಿಮಾಸ್‌ ಹೊಸ ಮೆರಗು.

ಮನರಂಜನೆಯ ಮಹಾಪೂರ ಹರಿಸಲು ಪ್ರತಿನಿತ್ಯ ಐದು ಪ್ರದರ್ಶನದಂತೆ ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್‌, ಸೇರಿದಂತೆ ಪ್ರಪಂಚದ ಎಲ್ಲಾ ಭಾಷೆಗಳ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಪ್ರೆಸ್ಟೀಸ್‌ ಗ್ರೂಪ್‌ನ 125 ಕೋಟಿಯ ವಾಣಿಜ್ಯ ಸಂಕೀರ್ಣದಲ್ಲಿ , ಸಿನಿಮಾಗಳಿಗಾಗಿಯೇ ಸುಮಾರು 26 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿನಿಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ.

ಅಂತರರಾಷ್ಟ್ರೀಯ ಮಟ್ಟದ ವ್ಯವಸ್ಥೆಗಳು ಇಲ್ಲಿದ್ದು, ರಾಷ್ಟ್ರದಲ್ಲಿಯೇ ಅತಿ ದೊಡ್ಡ ಮಲ್ಟಿಪ್ಲೆಕ್ಸ್‌ ಹಾಲ್‌ ಎನ್ನುವ ಹೆಗ್ಗಳಿಕೆ ಯನ್ನು ತನ್ನದಾಗಿಸಿಕೊಂಡಿದೆ. 1,20,000 ಚದರು ಅಡಿ ವ್ಯಾಪ್ತಿಯ ಚಿತ್ರಕುಟೀರದ ಒಂದೇ ಸೂರಿನಡಿ, ಹನ್ನೊಂದು ಚಿತ್ರಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. 2019 ಆಸನಗಳ ಸಾಮಾರ್ಥ್ಯದ ಸಿನಿ ಮಳಿಗೆಯ ಮೂರು ಹಂತದ ವೈಶಿಷ್ಟ ್ಯಗಳು ಹೀಗಿವೆ;

  1. ಗೋಲ್ಡ್‌ ಕ್ಲಾಸ್‌ : ಎರಡು ಆಲ್ಟ್ರೋ ಪ್ರೀಮಿಯಂ ಸಿನಿಮಾ ಹಾಲ್‌ಗಳಿದ್ದು, ಇಲ್ಲಿ ಪ್ರೇಕ್ಷಕರಿಗೆ ರಾಜ ಮರ್ಯಾದೆ. ಕೇವಲ 32 ಆಸನಗಳ ಗೋಲ್ಡ್‌ ಕ್ಲಾಸ್‌ಗೆ ಪ್ರವೇಶ ದರ ರೂ.350. ಆದರೆ ಇಲ್ಲಿ ಸಿನಿಮಾ ನೋಡುವುದಲ್ಲ , ಅನುಭವಿಸಿದ ತೃಪ್ತಿ ದಕ್ಕುತ್ತದೆ ಎನ್ನುತ್ತಿದೆ ಪಿವಿಆರ್‌ ಗ್ರೂಪ್‌. ರಾಷ್ಟ್ರದಲ್ಲಿ ಮೊದಲ ಬಾರಿಗೆ ಗೋಲ್ಡ್‌ ಕ್ಲಾಸ್‌ ಸಿನಿಮಾ ವ್ಯವಸ್ಥೆ ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ.
  2. ಸಿನಿಮಾ ಯುರೋಪ : ಎರಡು ಲಕ್ಸುರಿಯಸ್‌ ಪ್ರದರ್ಶನ ಕೇಂದ್ರದ ಸಿನಿಮಾ ಯುರೋಪ 372 ಆಸನಗಳನ್ನು ಹೊಂದಿದೆ . ಪ್ರವೇಶ ದರ ರೂ.175.
  3. ಕ್ಲಾಸಿಕ್‌: ಏಳು ಕ್ಲಾಸಿಕ್‌ ಪ್ರದರ್ಶನ ಕೇಂದ್ರಗಳು ಇಲ್ಲಿದ್ದು, ಟಿಕೇಟ್‌ ದರ ರೂ.130(ಕನ್ನಡ ಚಿತ್ರವಾದರೆ ರೂ.60). ಒಟ್ಟು ಆಸನ ಸಾಮರ್ಥ್ಯ 400.
ನೆಚ್ಚಿನ ಚಿತ್ರವೀಕ್ಷಣೆಯಾಂದಿಗೆ ಉಚಿತವಾಗಿ ಆಹಾರ ಮತ್ತು ಕುರುಕಲು ತಿಂಡಿಗಳ ಸರಬರಾಜು ಇಲ್ಲುಂಟು. ಕೂರಲು ಚೆಂದದ ಸೋಫಾ, ಕೈಗೊಂದು ಕಫ್‌ ಕಾಫಿ, ಕಣ್ಣು ತುಂಬಾ ಸಿನಿಮಾ, ಸಾಕಲ್ಲ ಸ್ವರ್ಗಕ್ಕೆ ಕಿಚ್ಚು ಹಚ್ಚುವುದಕ್ಕೆ! ಚಿತ್ರರಂಗದ ಸೂಪರ್‌ ಸ್ಟಾರ್‌ಗಳನ್ನು ನೋಡಲು ಪ್ರೇಕ್ಷಕರು ಸಹಾ ಯಾವೊಬ್ಬ ಸೂಪರ್‌ ಸ್ಟಾರ್‌ಗಿಂತ ಕಡಿಮೆ ಇಲ್ಲ ಎನ್ನುವ ಅಭಿಪ್ರಾಯ ಪಿವಿಆರ್‌ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಬಿಐ ಅವರದು. ಹೀಗಾಗಿ ರಾಜ ಮನ್ನಣೆಯನ್ನು ಪ್ರೇಕ್ಷಕರಿಗೆ ಸದಾ ನಿರೀಕ್ಷಿಸಬಹುದು.

ಚಲನಚಿತ್ರ ಪ್ರದರ್ಶನಕ್ಕೆ ಹೊಸ ತಂತ್ರಜ್ಞಾನದ ಬಳಕೆ ಹಾಗೂ ಟಿಹೆಚ್‌ಎಕ್ಸ್‌ ಸೌಂಡ್‌ ಸಿಸ್ಟಮ್‌ನ ಮೂವಿ ಮ್ಯಾಜಿಕ್‌ ಕಾಣಲು ಪಿವಿಆರ್‌ ಸಿನಿಮಾಸ್‌ ಸಜ್ಜಾಗಿದೆ. ಸಿನಿಮಾ ನೆಪದಲ್ಲಿ ಅತ್ತ ಇತ್ತ ಕಣ್ಣಾಡಿಸಿ, ಷಾಪಿಂಗ್‌ ಮಾಡುವ ಅವಕಾಶ ಇಲ್ಲಿದೆ. ಒಂದು ರೀತಿಯಲ್ಲಿ ಟೂ ಇನ್‌ ಒನ್‌ ವ್ಯವಸ್ಥೆ. ಈ ಮೂಲಕ ಬೆಂಗಳೂರಿನ ಕಾಸ್ಮೋಪಾಲಿಟಿನ್‌ ರಂಗು ಹೆಚ್ಚಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X