ಕಂಚಿಶ್ರೀ ಕ್ಷೇಮ : ಪಲ್ಸ್ ರೇಟ್ ನಿಮಿಷಕ್ಕೆ 90, ರಕ್ತದೊತ್ತಡ 130/80
ಕಂಚಿಶ್ರೀ ಕ್ಷೇಮ : ಪಲ್ಸ್ ರೇಟ್ ನಿಮಿಷಕ್ಕೆ 90, ರಕ್ತದೊತ್ತಡ 130/80
ಸ್ವಾಮೀಜಿ ಹಾಗೂ ಮುರಳಿ ಮನೋಹರ ಜೋಷಿ ಭೇಟಿಗೆ ರಂಗ ಸಿದ್ಧತೆ
ಇದೆಲ್ಲಾ ಸರಿ. ಅತ್ತ ಜೈಲಿನಲ್ಲಿರುವ ಸ್ವಾಮೀಜಿ ಹೇಗಿದ್ದಾರೆ? ಮಧುಮೇಹದಿಂದ ಬಳಲುತ್ತಿರುವ 71 ವರ್ಷದ ವೃದ್ಧಜೀವದ ಆರೋಗ್ಯ ಹೇಗಿದೆ?
ಚಿಂತೆಗೆ ಅಗತ್ಯವಿಲ್ಲ ಎನ್ನುತ್ತಾರೆ ವೆಲ್ಲೂರು ಕಾರಾಗೃಹದ ಅಧೀಕ್ಷಕ ರಾಮಚಂದ್ರನ್.
ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಆರೋಗ್ಯದ ಬಗ್ಗೆ ಆತಂಕಕ್ಕೆ ಕಾರಣವಿಲ್ಲ . ಅವರ ಪಲ್ಸ್ ರೇಟ್ ನಿಮಿಷಕ್ಕೆ 90ರಷ್ಟಿದೆ. ರಕ್ತದೊತ್ತಡ 130/80ರಷ್ಟಿದೆ. ಹೃದಯ ಬಡಿತವೂ ಸರಿಯಾಗಿದೆ ಎಂದು ವೈದ್ಯರ ವರದಿಗಳನ್ನುಲ್ಲೇಖಿಸಿ ರಾಮಚಂದ್ರನ್ ನ.15ರ ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶಂಕರಾಚಾರ್ಯರು ಬೆಳಗಿನ ಉಪಾಹಾರಕ್ಕೆ ರಾಗಿ ಗಂಜಿ ಹಾಗೂ ಹಾಲು ಉಪಯೋಗಿಸುತ್ತಿದ್ದಾರೆ. ಮಧ್ಯಾಹ್ನದ ಊಟಕ್ಕೆ ಮೊಸರನ್ನ . ರಾತ್ರಿಯ ಊಟಕ್ಕೆ ಚಪಾತಿ ಅಥವಾ ಪೂರಿಗಳನ್ನು ಬಳಸುತ್ತಿದ್ದಾರೆ. ಮಧುಮೇಹಿಗಳಾದ ಸ್ವಾಮೀಜಿ ನಿಯಮಿತವಾಗಿ ಔಷಧಿಗಳನ್ನೂ ಸೇವಿಸುತ್ತಿದ್ದಾರೆ ಎಂದು ರಾಮಚಂದ್ರನ್ ಹೇಳಿದ್ದಾರೆ.
ಸ್ವಾಮೀಜಿ ಭೇಟಿಗೆ ಜೋಷಿ ಕಾತರ : ಕಂಚಿಶ್ರೀಗಳನ್ನು ಭೇಟಿ ಮಾಡಲು ಬಿಜೆಪಿಯ ಮಾಜಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ಕಾತರರಾಗಿದ್ದು , ನ.16ರ ಮಂಗಳವಾರ ್ಫಶ್ರೀಗಳನ್ನು ಜೋಷಿ ಭೇಟಿ ಮಾಡುವರು. ಭೇಟಿಯ ಕುರಿತು ಕಂಚಿಮಠ ಹಾಗೂ ಕಾನೂನು ಕಡೆಯಿಂದ ಜೋಷಿಯವರಿಗೆ ಹಸಿರು ನಿಶಾನೆ ದೊರೆತಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications