ನರಹಂತಕ ವೀರಪ್ಪನ್ ಸಂಹಾ-ರ ; ಶಿವನಸಮುದ್ರಕ್ಕೆ ಶಾಪ ವಿಮೋಚನೆ
ನರಹಂತಕ ವೀರಪ್ಪನ್ ಸಂಹಾ-ರ ; ಶಿವನಸಮುದ್ರಕ್ಕೆ ಶಾಪ ವಿಮೋಚನೆ
75 ಕೋಟಿ ವೆಚ್ಚದಲ್ಲಿ ಶಿವನಸಮುದ್ರ ಜಲವಿದ್ಯುತ್ ಘಟಕದ ನವೀಕರಣ
ಈ ಮುಂಚೆ ವೀರಪ್ಪನ್ ಹಾವಳಿಯಿಂದ ಪ್ರವಾಸಿಗರ ಪ್ರವೇಶಕ್ಕೆ ಇಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂ-ಧ-ವನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ. ಶತಮಾನದಷ್ಟು ಹಳೆಯದಾದ ಶಿವನ ಸಮುದ್ರ ಜಲವಿದ್ಯುತ್ ಘಟಕ ಡಿಸೆಂಬರ್‌ನಿಂದ ಪ್ರವಾಸಿಕರನ್ನು ಕೈ ಬೀಸಿ ಕರೆಯಲಿದೆ.
ಏಷ್ಯಾದಲ್ಲೇ ಪ್ರಥಮ ಜಲವಿದ್ಯುತ್ ಘಟಕ ಇದಾಗಿದ್ದು, ನಾಲ್ವಡಿ ಕೃಷ್ಣ ರಾಜ ಒಡೆಯರ್ 1902 ರಲ್ಲಿ ಸ್ಥಾಪಿಸಿದ್ದರು. ಸುಮಾರು 106ಮೀ ಎತ್ತರರಿಂದ ಕಾವೇರಿ ಮಾತೆ ಗಗನ ಚುಕ್ಕಿ-ಭರಚುಕ್ಕಿಯಾಗಿ ಇಲ್ಲಿಂದ ಮನಮೋಹಕವಾಗಿ ಜಾರುತ್ತಾಳೆ. ಆ ಮೂಲಕ ಕಾವೇರಿ ಕಣ್ಣಿ-ಗೆ ಹಬ್ಬ ಮಾತ್ರವಲ್ಲ, ನಾಡಿಗೆ ಬೆಳಕ(ವಿದ್ಯುತ್)ನ್ನು ಸಹಾ ತರುತ್ತಿದ್ದಾಳೆ. ಸುಮಾರು 75 ಕೋಟಿ ವೆಚ್ಚದಲ್ಲಿ ಸರಕಾರ ಇಲ್ಲಿ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಿದೆ.
ಶಿವನ ಸಮುದ್ರ ಹಾಗೂ ಅದರ ಆಜೂಬಾಜಿನ ಶಿಂಷಾ, ತಲಕಾಡುಗಳಿಗೆ ಪ್ರವಾಸಿ ಕೇಂದ್ರದ ಆಕರ್ಷಣೆ ತುಂಬಲು ಸರಕಾರ ಮುಂದಾಗಿದೆ. ರಾಜಧಾನಿ ನಗರ ಬೆಂಗಳೂರಿಗೆ 120 ಕಿ.ಮೀ. ದೂರದಲ್ಲಿರುವ ಶಿವನಸಮುದ್ರ ಪ್ರವಾಸಿಗರನ್ನು ಮತ್ತಷ್ಟು ಸೆಳೆಯಲು ಸಜ್ಜಾಗಿದೆ. ಡಿಸೆಂಬರ್‌ನಲ್ಲಿ ಶಿವನ ಸಮುದ್ರ ಜಲವಿದ್ಯುತ್ ಘಟಕದ ಶತಮಾನೋತ್ಸವ ಆಚರಿಸಲು ಸಿದ್ಧತೆಗಳು ನಡೆದಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications