ಭಾರತ ಶರಣಾಗತಿ : ನಾಗಪುರ ಟೆಸ್ಟ್‌ ಹಾಗೂ ಸರಣಿ ಕಾಂಗರೂ ವಶ

ಭಾರತ ಶರಣಾಗತಿ : ನಾಗಪುರ ಟೆಸ್ಟ್‌ ಹಾಗೂ ಸರಣಿ ಕಾಂಗರೂ ವಶ
35 ವರ್ಷದ ನಂತರ ಭಾರತದ ನೆಲದಲ್ಲಿ ಸರಣಿ ಗೆದ್ದ ಆಸ್ಟ್ರೇಲಿಯಾ

ನಾಗಪುರ : ಆಸ್ಟ್ರೇಲಿಯಾದ ಕನಸು ಕೊನೆಗೂ ನನಸಾಗಿದೆ. ಆಲನ್‌ ಬಾರ್ಡರ್‌, ಸ್ಟೀವ್‌ ವಾ ಬಳಗ ಸಾಧಿಸಲು ಸಾಧ್ಯವಾಗದ್ದನ್ನು ಹಂಗಾಮಿ ನಾಯಕ ಗಿಲ್‌ಕ್ರಿಸ್ಟ್‌ ದಂಡು ಸಾಧಿಸಿತೋರಿದೆ.

ಅ.29ರ ಶುಕ್ರವಾರ ನಾಗಪುರದಲ್ಲಿ ಕೊನೆಗೊಂಡ ಟೆಸ್ಟ್‌ ಪಂದ್ಯದಲ್ಲಿ ಹಂಗಾಮಿ ನಾಯಕ ರಾಹುಲ್‌ ಬಳಗ ಹೋರಾಟವಿಲ್ಲದೆ ಶರಣಾಗುವುದರೊಂದಿಗೆ ಭಾರತದಲ್ಲಿ ಸರಣಿ ಗೆಲ್ಲುವ ಆಸ್ಟ್ರೇಲಿಯಾದ ಗುರಿ ಈಡೇರಿತು. ಇದರೊಂದಿಗೆ 35 ವರ್ಷಗಳ ನಂತರ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ಟೆಸ್ಟ್‌ ಸರಣಿ ಗೆದ್ದಂತಾಗಿದೆ.

ಗುರುವಾರ ಮೂರನೇ ದಿನದಂತ್ಯಕ್ಕೆ ಮೂರು ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸಿದ್ದ ಆಸ್ಟ್ರೇಲಿಯಾ, ಶುಕ್ರವಾರದ ಬೆಳಗಿನ ಪಾಳಿಯಲ್ಲಿ ತನ್ನ ಇನಿಂಗ್ಸ್‌ನ್ನು 5 ವಿಕೆಟ್‌ನಷ್ಟಕ್ಕೆ 329 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಆಸ್ಟ್ರೇಲಿಯಾದ ಪರ ಮಾರ್ಟಿನ್‌ 97 ಹಾಗೂ ಕ್ಯಾಟಿಚ್‌ 99 ರನ್‌ ಗಳಿಸಿ ಔಟಾದರು. ಆಸ್ಟ್ರೇಲಿಯಾ ಒಡ್ಡಿದ 543ರನ್‌ಗಳನ್ನು ಬೆನ್ನತ್ತಿದ ಭಾರತ 200 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಭಾರತದ ಪರ ಶೆಹ್ವಾಗ್‌ 58 ಹಾಗೂ ಅಗರ್ಕರ್‌ ಅಜೇಯ 44 ರನ್‌ ಗಳಿಸಿದರು. ಕಾಂಗರೂ ಪರ ಜಿಲೆಸ್ಪಿ 4 ವಿಕೆಟ್‌ ಕಬಳಿಸಿದರು.

ಅಂತಿಮವಾಗಿ ಭಾರತ 342 ರನ್‌ಗಳ ಸೋಲನುಭವಿಸಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+