• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರ್ರೀ ಮೆಕ್ಕ, ಮದೀನ ; ಮಂಡ್ಯ, ಮೈಸೂರ್‌, ಶ್ರೀರಂಗ್‌ಪಟ್ನಾ.....

By Staff
|

ಯಾರ್ರೀ ಮೆಕ್ಕ, ಮದೀನ ; ಮಂಡ್ಯ, ಮೈಸೂರ್‌, ಶ್ರೀರಂಗ್‌ಪಟ್ನಾ.....
ಭಾರತದಿಂದ ತೀರ್ಥಯಾತ್ರೆ, ನಿಮ್ಮೂರಿನಿಂದ ಸಾಂಸ್ಕೃತಿಕ ಯಾತ್ರೆ!

  • ಪಮ್ಮಿ
Bon Voyageನವದೆಹಲಿ : ಹಜ್‌ ಯಾತ್ರೆಗೆ ತೆರಳುವ ಮುಸ್ಲಿಂ ಸಮುದಾಯಕ್ಕೆ ಇನ್ನಷ್ಟು ಅನುಕೂಲ ಕಲ್ಪಿಸಲು ಮನಮೋಹನ್‌ ಸಿಂಗ್‌ ನೇತೃತ್ವದ ಸಮ್ಮಿಶ್ರ ಸರಕಾರ ಮುಂದೆ ಬಂದಿದೆ. ಹಜ್‌ಗೆ ಹೋಗುವವರು ಸರಕಾರದ ಅನುಮತಿ ಪಡೆಯಬೇಕಾಗಿರುವುದು ನಿಯಮ. 2005 ರಲ್ಲಿ ನಡೆಯುವ ಹಜ್‌ಗೆ ಪ್ರವಾಸ ಅನುಮತಿ ಕೋರಿ ಸರಕಾರಕ್ಕೆ ತಲುಪಿರುವ ಅರ್ಜಿಗಳ ಸಂಖ್ಯೆ ಎಂಬತ್ತೆರಡು ಸಾವಿರ. ಕಳೆದ ವರ್ಷಕ್ಕಿಂತ ಸುಮಾರು ಶೇಕಡ 15 ರಷ್ಟು ಹೆಚ್ಚು. ಸಂಖ್ಯೆಗಳಲ್ಲಿ ತಿಳಿಸುವುದಾದರೆ ಹತ್ತು ಸಾವಿರ ಹೆಚ್ಚು. ಅರ್ಜಿದಾರರೆಲ್ಲರಿಗೂ ಪ್ರವಾಸ ಅನುಮತಿ ನೀಡುವ ನಿರ್ಧಾರವನ್ನು ಸರಕಾರ ಪ್ರಕಟಿಸಿದೆ.

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿಮಾನ ಏರುವ ತಾಣಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಅಹಮದಾಬಾದ್‌, ಬೆಂಗಳೂರು, ಚೆನ್ನೈ, ಕ್ಯಾಲಿಕಟ್‌, ನವದೆಹಲಿ, ಹೈದರಾಬಾದ್‌, ಜೈಪುರ, ಕೋಲ್ಕಟ, ಲಕ್ನೊ, ಮುಂಬೈ, ನಾಗಪುರ ಮತ್ತು ಶ್ರೀನಗರದಿಂದ ಯಾತ್ರಿಗಳು ವಿಮಾನ ಹತ್ತಬಹುದು. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ತಾಣಗಳೆಂದರೆ ಗುವಹಾಟಿ ಮತ್ತು ಔರಂಗಾಬಾದ್‌.

ತೀರ್ಥಯಾತ್ರೆ ಕೈಗೊಳ್ಳುವ ಮುಸ್ಲಿಂ ಬಾಂಧವರಿಗೆ ಭಾರತ ಸರಕಾರ ಹಲಕೆಲವು ಸೌಕರ್ಯ ಮತ್ತು ರಿಯಾಯಿತಿಗಳನ್ನು ನೀಡುತ್ತಾ ಬಂದಿದೆ. ಜೆಫಾ, ಮದೀನಾಗೆ ಭಾರತದಿಂದ ಹೋಗಿ ವಾಪಸ್ಸು ಬರಲು ಯಾತ್ರಿಕ 12 ಸಾವಿರ ರೂಪಾಯಿ ಕಟ್ಟಿದರೆ ಸಾಕು. ವೈಮಾನಿಕ ಸಂಸ್ಥೆಗಳಿಗೆ ತಲುಪಬೇಕಾದ ಇನ್ನುಳಿಕೆ ಹಣವನ್ನು ಸರಕಾರ ಭರಿಸುತ್ತದೆ. ಆದಾಯ ತೆರಿಗೆ ಕಟ್ಟುವ ಕಕ್ಷೆಯಲ್ಲಿ ಬರುವ ಯಾತ್ರಾರ್ಥಿಗಳಿಗೆ ಈ ಸವಲತ್ತುಗಳು ದೊರಕುವುದಿಲ್ಲ.

ನೀವು ನೋಡಿ ನಲಿಯಲಿರುವ ದಸರಾ..

Bus to Mysoreದಸರಾ ಸಂಭ್ರಮವನ್ನು ಕಣ್ಣಾರೆ ನೋಡಲು ನೀವು ಮೈಸೂರಿಗೆ ಹೋಗುತ್ತಿದ್ದೀರಾ? ನೀವೇ ಅದೃಷ್ಟವಂತರು. ಈ ಋತುವಿನಲ್ಲಿ ಮೈಸೂರು ಕಡೆ ಪ್ರಯಾಣ ಹೊರಡುವವರು ಹೆಚ್ಚು. ಮೊದಲೇ ತುಂಬಿ ತುಳುಕುವ ನಮ್ಮ ಕೆಂಪು ಬಸ್ಸುಗಳು ಈ ಸೀಸನ್‌ನಲ್ಲಿ ತುಂಬಿ ತೂರಾಡುತ್ತಿರುತ್ತವೆ. ಮೈಸೂರಿಗೆ ಸಾಂಸ್ಕೃತಿಕ ತೀರ್ಥಯಾತ್ರೆ ಕೈಗೊಳ್ಳುವ ನಮ್ಮ ಜನಕ್ಕೆ ಕೆಂಪು ಬಸ್‌ ಸೌಕರ್ಯವನ್ನು ಹೆಚ್ಚಿಸಲಾಗಿದೆ. ರಾಜ್ಯದ ನಾನಾ ಊರುಗಳ ಒಟ್ಟು 44 ಜಾಗಗಳಿಂದ ಹೆಚ್ಚುವರಿ 350 ಬಸ್ಸುಗಳು ಈ ವಾರಾಂತ್ಯ ಮೈಸೂರು ದಿಕ್ಕಿನತ್ತ ಓಡುತ್ತವೆ. ರಿಸರ್ವೇಶನ್‌ ಮಾಡಿಸಿಕೊಂಡು ನಿಧಾನವಾಗಿ ಹೋಗಿ ಕ್ಷೇಮವಾಗಿ ವಾಪಸು ಬನ್ನಿ. ಓಡುತ್ತಾ ಓಡುತ್ತಾ ಬಸ್ಸು ಹತ್ತಬೇಡಿ. ಮಕ್ಕಳು ಮರಿಯ ಕೈ ಬಿಡಬೇಡಿ.

ಬೆಂಗಳೂರಿನಿಂದ ದಸರಾರ್ಥಿ ಪ್ರಯಾಣಿಕರಿಗಾಗಿ ಇನ್ನೂ 100 ಬಸ್ಸುಗಳನ್ನು ಹಾಕಲಾಗಿದೆ. ಮಲ್ಲೇಶ್ವರಂ, ಜಯನಗರ ನಾಲ್ಕನೇ ಬ್ಲಾಕ್‌, ಬನಶಂಕರಿ, ಜಾಲಹಳ್ಳಿ ಕ್ರಾಸ್‌ನಿಂದ ಹೊರಡುವ ಪ್ರಯಾಣಿಕರನ್ನು ಆಯಾ ಜಾಗಗಳಿಂದಲೇ ಹತ್ತಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹ್ಯಾಪಿ ಜರ್ನಿ, ಹ್ಯಾಪಿ ದಸರಾ.

Post your views

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more